ಪ್ರತಿಷ್ಠಿತ 67ನೇ ಫಿಲ್ಮ್ಫೇರ್ ಅವಾರ್ಡ್ಸ್ 2022 ಈ ಸಲ ಬೆಂಗಳೂರಿನಲ್ಲಿ ನಡೆಯಲಿದೆ. ಅಚ್ಚರಿಯ ವಿಚಾರ ಏನೆಂದರೆ, ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಅವಾರ್ಡ್ ಕಾರ್ಯಕ್ರಮ ನಡೆಯಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇದೇ ಅಕ್ಟೋಬರ್ 9ರಂದು 67ನೇ ಸೌತ್ ಫಿಲ್ಮ್ಫೇರ್ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೊದಲ ಸಲ ಆಯೋಜನೆಗೊಳ್ಳುತ್ತಿದೆ. ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ಜತೆಗೆ ಸೌತ್‌ನ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ಮಂದಿಯೂ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಬಾಲಿವುಡ್‌ನ ಕೆಲವರೂ ಆಗಮಿಸುತ್ತಿದ್ದಾರೆ.
ಕನ್ನಡದ ಪ್ರತಿಯೊಬ್ಬ ಹಿರಿಯ ನಟರಿಗೆ ಆಮಂತ್ರಣ..
ಇನ್ನು ಬೆಂಗಳೂರಿನಲ್ಲಿಯೇ ಈ ಸಲದ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದುಡಿದ ಪ್ರತಿಯೊಬ್ಬ ಹಿರಿಯ ನಟ-ನಟಿಯರಿಗೂ ಅವರ ಮನೆ ಮನೆಗೆ ತೆರಳಿ ಆಮಂತ್ರಣ ನೀಡಲಾಗಿದೆ. ಒಟ್ಟಾರೆಯಾಗಿ 20 ಸಾವಿರಕ್ಕೂ ಅಧಿಕ ಮಂದಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಪಬ್ಲಿಕ್ ವೀಕ್ಷಣೆಗೆ ಬುಕ್ ಮೈ ಶೋದಲ್ಲಿ ಟಿಕೆಟ್ ವ್ಯವಸ್ಥೆ ಇದೆ. ಫಿಲಂ ಚೇಂಬರ್‌ನಲ್ಲಿಯೂ ಸಾವಿರ ಟಿಕೆಟ್ ನೀಡಿದ್ದೇವೆ. ಸಂಜೆ 4.30ರಿಂದ ರೆಡ್ ಕಾರ್ಪೆಟ್ ಶುರುವಾದರೆ, ಮಧ್ಯರಾತ್ರಿವರೆಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
- ಅಕ್ಟೋಬರ್ 9ರಂದು ಸಂಜೆ 4.30ಕ್ಕೆ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ರೆಡ್ ಕಾರ್ಪೆಟ್ ಕಾರ್ಯಕ್ರಮ ನಡೆಯಲಿದ್ದು, ಈ ಕೆಂಪು ಹಾಸಿನ ಮೇಲೆ ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಐಯಪ್ಪನ್, ಐಂದ್ರಿತಾ ರೇ, ಸುಕುಮಾರ್ ಬಂಡ್ರೆಡ್ಡಿ, ತಬಿತಾ ಬಂಡ್ರೆಡ್ಡಿ, ನವೀನ್ ಯೆರ್ನೇನಿ, ಟಬು, ಆರ್ ಮಾಧವನ್, ಮುರಳಿ ಶರ್ಮಾ, ನಾನಿ, ಚಿತ್ರ ಗಾಯಕ, ಡಿಎಸ್ಪಿ, ಕೆ ಮಣಿಕಂದನ್, ಅಲ್ಲು ಅರ್ಜುನ್ ಮತ್ತು ಇತರರು ಆಗಮಿಸಲಿದ್ದಾರೆ.