Saturday, December 3, 2022

ಚನ್ನಪಟ್ಟಣದ ಹಿರಿಯ ಸಾಹಿತ್ಯ ಪರಿಷತ್ ರಾಮನಗರ ಜಿಲ್ಲಾಧ್ಯಕ್ಷ, ಜೆಡಿಎಸ್​ ಮುಖಂಡ ಸಿಂ.ಲಿಂ.ನಾಗರಾಜ್ ಅವರ ನಿಧನ


ಸಿಂಗರಾಜಪುರ ಸಿಂ ಲಿಂ ನಾಗರಾಜುರವರ ನಿವಾಸ




 ರಾಮನಗರ: ಚನ್ನಪಟ್ಟಣದ ಹಿರಿಯ ಜೆಡಿಎಸ್​ ಮುಖಂಡ ಸಿಂ.ಲಿಂ.ನಾಗರಾಜ್​ ಅವರು ಹೃದಯಾಘಾತದಿಂದ ನಿಧನರಾಗಿದ್ದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

 ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಒಡನಾಡಿಯಾಗಿದ್ದ ನಾಗರಾಜ್​ ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದರು. 2011ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿದ್ದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಇಂದು ಸಂಜೆ ಸಿಂಗರಾಜಿಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

Restolex ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ದುರಂತ

 ನೆಲಮಂಗಲ ಸಮೀಪದ ಟಿ ಬೇಗೂರು ಗ್ರಾಮದಲ್ಲಿ Restolex ಎಂಬ ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಮಿಷನರಿ, ಕಚ್ಛಾ ಮತ್ತು ಸಿದ್...