Showing posts with label Movie matter. Show all posts
Showing posts with label Movie matter. Show all posts

Saturday, October 8, 2022

67th South Filmfare Awards 2022: ಕರ್ನಾಟಕದಲ್ಲಿ ಮೊದಲ ಬಾರಿಗೆ, ನಾಳಿನ ಈವೆಂಟ್ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಪ್ರತಿಷ್ಠಿತ 67ನೇ ಫಿಲ್ಮ್​ಫೇರ್ ಅವಾರ್ಡ್ಸ್‌ 2022 ಈ ಸಲ ಬೆಂಗಳೂರಿನಲ್ಲಿ ನಡೆಯಲಿದೆ. ಅಚ್ಚರಿಯ ವಿಚಾರ ಏನೆಂದರೆ, ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಅವಾರ್ಡ್‌ ಕಾರ್ಯಕ್ರಮ ನಡೆಯಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಇದೇ ಅಕ್ಟೋಬರ್‌ 9ರಂದು 67ನೇ ಸೌತ್‌ ಫಿಲ್ಮ್​ಫೇರ್ ಅವಾರ್ಡ್ಸ್‌ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೊದಲ ಸಲ ಆಯೋಜನೆಗೊಳ್ಳುತ್ತಿದೆ. ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯ ಜತೆಗೆ ಸೌತ್‌ನ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ಮಂದಿಯೂ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಬಾಲಿವುಡ್‌ನ ಕೆಲವರೂ ಆಗಮಿಸುತ್ತಿದ್ದಾರೆ.

ಕನ್ನಡದ ಪ್ರತಿಯೊಬ್ಬ ಹಿರಿಯ ನಟರಿಗೆ ಆಮಂತ್ರಣ..

ಇನ್ನು ಬೆಂಗಳೂರಿನಲ್ಲಿಯೇ ಈ ಸಲದ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದುಡಿದ ಪ್ರತಿಯೊಬ್ಬ ಹಿರಿಯ ನಟ-ನಟಿಯರಿಗೂ ಅವರ ಮನೆ ಮನೆಗೆ ತೆರಳಿ ಆಮಂತ್ರಣ ನೀಡಲಾಗಿದೆ. ಒಟ್ಟಾರೆಯಾಗಿ 20 ಸಾವಿರಕ್ಕೂ ಅಧಿಕ ಮಂದಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಪಬ್ಲಿಕ್‌ ವೀಕ್ಷಣೆಗೆ ಬುಕ್‌ ಮೈ ಶೋದಲ್ಲಿ ಟಿಕೆಟ್‌ ವ್ಯವಸ್ಥೆ ಇದೆ. ಫಿಲಂ ಚೇಂಬರ್‌ನಲ್ಲಿಯೂ ಸಾವಿರ ಟಿಕೆಟ್‌ ನೀಡಿದ್ದೇವೆ. ಸಂಜೆ 4.30ರಿಂದ ರೆಡ್‌ ಕಾರ್ಪೆಟ್‌ ಶುರುವಾದರೆ, ಮಧ್ಯರಾತ್ರಿವರೆಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

  • ಅಕ್ಟೋಬರ್‌ 9ರಂದು ಸಂಜೆ 4.30ಕ್ಕೆ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಇಂಟರ್‌ನ್ಯಾಷನಲ್‌ ಎಕ್ಸಿಬಿಷನ್‌ ಸೆಂಟರ್‌ನಲ್ಲಿ ರೆಡ್‌ ಕಾರ್ಪೆಟ್‌ ಕಾರ್ಯಕ್ರಮ ನಡೆಯಲಿದ್ದು, ಈ ಕೆಂಪು ಹಾಸಿನ ಮೇಲೆ ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಐಯಪ್ಪನ್, ಐಂದ್ರಿತಾ ರೇ, ಸುಕುಮಾರ್ ಬಂಡ್ರೆಡ್ಡಿ, ತಬಿತಾ ಬಂಡ್ರೆಡ್ಡಿ, ನವೀನ್ ಯೆರ್ನೇನಿ, ಟಬು, ಆರ್ ಮಾಧವನ್, ಮುರಳಿ ಶರ್ಮಾ, ನಾನಿ, ಚಿತ್ರ ಗಾಯಕ, ಡಿಎಸ್ಪಿ, ಕೆ ಮಣಿಕಂದನ್, ಅಲ್ಲು ಅರ್ಜುನ್ ಮತ್ತು ಇತರರು ಆಗಮಿಸಲಿದ್ದಾರೆ.

ಸಿಎಂ ಬೊಮ್ಮಾಯಿ ಮುಖ್ಯ ಅತಿಥಿ..

ಈ ಅವಾರ್ಡ್‌ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಮರ್‌ ಫಿಲಂ ಫ್ಯಾಕ್ಟರಿಯ ಕಮರ್‌, ಫಿಲ್ಮ್​ಫೇರ್ ಅವಾರ್ಡ್‌ ಕಾರ್ಯಕ್ರಮವನ್ನು ಬೆಂಗಳೂರಿಗೆ ತರಬೇಕು ಎಂದು 2018ರಲ್ಲಿಯೇ ಪ್ಲಾನ್‌ ಆಗಿತ್ತು. ಆದರೆ, ಆಗ ಅದು ಸಾಧ್ಯವಾಗಲಿಲ್ಲ. ಚೆನ್ನೈ, ಹೈದರಾಬಾದ್‌ಗಷ್ಟೇ ಸೀಮಿತವಾಗಿತ್ತು. ಕೊನೆಗೆ ಕೊವೀಡ್‌ ಬಂತು, ಬಳಿಕ ಶತಾಯಗತಾಯ ಪ್ರಯತ್ನದಿಂದ ಬೆಂಗಳೂರಿಗೆ ಮೊದಲ ಸಲ ಈ ಕಾರ್ಯಕ್ರಮ ತರುತ್ತಿದ್ದೇವೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ" ಎನ್ನುತ್ತಾರೆ.


Tuesday, March 9, 2021

YASH: ಮತ್ತೊಂದು ಹೊಸ ದಾಖಲೆ ಬರೆದ ರಾಕಿಂಗ್​ಸ್ಟಾರ್​ ಯಶ್

KGF ಮೂಲಕ ನಟ ಯಶ್​ ಪ್ಯಾನ್​ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ತಮ್ಮ ಸಿನಿಮಾದ ಮೂಲಕ ದಾಖಲೆ ನಿರ್ಮಿಸಿರುವ ಅವರು ಈಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.

ನಟ ಯಶ್ ಪ್ರಸ್ತುತ ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಕೆಜಿಎಫ್​ ಚಿತ್ರದ ಮೂಲಕ ದೇಶದ ಎಲ್ಲಾ ಅಭಿಮಾನಿಗಳನ್ನು ಹೊಂದಿದ ಹಿನ್ನಲೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ. ಹಿಂದಿ, ತೆಲುಗಿನಲ್ಲಿ ಮಿಂಚಿರುವ ನಟ ಕಿಚ್ಚ ಸುದೀಪ್​ 1.1 ಮಿಲಿಯನ್​ ಅಭಿಮಾನಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ 854 ಸಾವಿರ ಅಭಿಮಾನಿಗಳನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ.ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ 1.3 ಮಿಲಿಯನ್​ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ರಕ್ಷಿತ್​ ಶೆಟ್ಟಿ 824 ಸಾವಿರ ಅಭಿಮಾನಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಧ್ರುವ ಸರ್ಜಾ 25.4 ಸಾವಿರ ಅಭಿಮಾನಿ ಹೊಂದಿದ್ದಾರೆ. ನಟ ಚಿರಂಜೀವಿ ಅಗಲಿಕೆಯಾದರೂ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. ಈಗಲೂ ಅವರ ಖಾತೆಯಲ್ಲಿ 345 ಸಾವಿರ ಅಭಿಮಾನಿಗಳಿದ್ದಾರೆ.






Monday, February 22, 2021

ಕೆಜಿಎಫ್‌2: ತೆಲುಗು ಹಕ್ಕು 65 ಕೋಟಿ ರು.ಗೆ ಮಾರಾಟ

ತೆಲುಗಿನ ಖ್ಯಾತ ನಿರ್ಮಾಪಕ ದಿಲ್‌ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್‌ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ‘ಕೆಜಿಎಫ್‌ 2’ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಯ ಪೂರ್ವ ಬ್ಯುಸಿನೆಸ್‌ಗೆ ಮುಂದಾಗಿದ್ದು, ಅದರ ಮೊದಲ ಭಾಗವೆಂಬಂತೆ ತೆಲುಗಿನಲ್ಲಿ ಈ ಚಿತ್ರದ ಬಿಡುಗಡೆಯ ಹಕ್ಕುಗಳನ್ನು 65 ಕೋಟಿ ರು.ಗೆ ಮಾರಾಟ ಮಾಡಲಾಗಿದೆ.

https://youtube.com/playlist?list=PLTMWHXPzg7zC6GWbepothj3I006OCr726


ತೆಲುಗಿನ ಖ್ಯಾತ ನಿರ್ಮಾಪಕ ದಿಲ್‌ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್‌ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ ಈ ಚಿತ್ರದ ಬಿಡುಗಡೆ ಹಕ್ಕುಗಳಿಗಾಗಿ ಸಾಕಷ್ಟುನಿರ್ಮಾಪಕರು ಸಾಲಿನಲ್ಲಿ ನಿಂತಿದ್ದರು. ಅದಕ್ಕೆ ಕಾರಣ ಚಾಪ್ಟರ್‌ 1 ಯಶಸ್ಸು. ಅಮೆಜಾನ್‌ ಪ್ರೈಮ್‌ ಸೇರಿದಂತೆ ಡಿಜಿಟಲ್‌ ಮಾರುಕಟ್ಟೆಯಲ್ಲಿ ಈ ಚಿತ್ರ ಮಾಡಿದ ಗಳಿಕೆ. ಈ ಹಿಂದೆ ವರಾಹಿ ಚಲನಚಿತ್ರಂ ಬ್ಯಾನರ್‌ ‘ಕೆಜಿಎಫ್‌ 1’ರ ಬಿಡುಗಡೆಯ ಹಕ್ಕುಗಳನ್ನು ಕೇವಲ 5 ಕೋಟಿಗೆ ಕೊಂಡು, 12 ಕೋಟಿ ಲಾಭ ಮಾಡಿತ್ತು. ಟೀವಿ ಹಕ್ಕುಗಳಲ್ಲೂ ಎರಡು ಪಟ್ಟು ಲಾಭ ಮಾಡಿಕೊಂಡಿದ್ದರು. ಚಾಪ್ಟರ್‌ 1ರ ಬ್ಯುಸಿನೆಸ್‌ ನೋಡಿಯೇ ಚಾಪ್ಟರ್‌ 2 ಬಿಡುಗಡೆಯ ಹಕ್ಕುಗಳಿಗಾಗಿ ಹಲವು ನಿರ್ಮಾಪಕರು ಮುಂದೆ ಬಂದಿದ್ದರು. ಆದರೆ, ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಹೇಳಿದ ರೇಟು ಕೇಳಿ ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೌದು, ಮೊದಲಿಗೆ 70 ಕೋಟಿಗೆ ಬೇಡಿಕೆ ಇಟ್ಟಿದ್ದರು ನಿರ್ಮಾಪಕರು. ‘ಎರಡೂ ತೆಲುಗು ರಾಜ್ಯಗಳ ಬಿಡುಗಡೆ ಹಕ್ಕುಗಳಿಗಾಗಿ ಇಷ್ಟೊಂದು ಮೊತ್ತವೇ’ ಎಂದು ಹಲವು ನಿರ್ಮಾಪಕರು ಮಾತನಾಡಿಕೊಂಡಿದುಂಟು.

ನಿರೀಕ್ಷೆಗೂ ಮೀರಿ ವಿತರಣೆಯ ರೈಟ್ಸ್‌ನಲ್ಲಿ ಸದ್ದು ಮಾಡುತ್ತಿದ್ದ ‘ಕೆಜಿಎಫ್‌ 2’ ಚಿತ್ರದ ವ್ಯವಹಾರಕ್ಕೆ ಕೈ ಹಾಕದೆ ಹಲವರು ಸುಮ್ಮನಿದ್ದಾಗ ದಿಲ್‌ ರಾಜು ಮಾತ್ರ ಧೈರ್ಯ ಮಾಡಿ 70 ಕೋಟಿಯನ್ನು 65 ಕೋಟಿ ರು.ಗೆ ಇಳಿಸಿಕೊಂಡು ರೈಟ್ಸ್‌ ತೆಗೆದುಕೊಂಡಿದ್ದಾರೆ. ಆ ಮೂಲಕ ತೆಲುಗಿನ ಬಹು ದೊಡ್ಡ ನಿರ್ಮಾಪಕ ಹಾಗೂ ವಿತರಕನ ಕೈಗೆ ಯಶ್‌ ಚಿತ್ರ ಸೇರಿಕೊಂಡಿದೆ. ಅಂದಹಾಗೆ 65 ಕೋಟಿ ರು.ಗೆ ವ್ಯವಹಾರ ಪಕ್ಕಾ ಮಾಡಿಕೊಂಡಿರುವ ದಿಲ್‌ ರಾಜು, ಈಗಾಗಲೇ ನಿರ್ಮಾಪಕರಿಗೆ ಮುಂಗಡವಾಗಿಯೂ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ. ಕನ್ನಡ ಸ್ಟಾರ್‌ ನಟನೊಬ್ಬನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೂ ಮೊದಲೇ ಈ ರೀತಿ ಬ್ಯುಸಿನೆಸ್‌ ಮಾಡುತ್ತಿರುವುದು ನೋಡಿ ಟಾಲಿವುಡ್‌ ಕೂಡ ನಿಬ್ಬೆರಗಾಗಿದೆ. ಸದ್ಯ ತಾವು ಅಂದುಕೊಂಡಂತೆ ಟಾಲಿವುಡ್‌ನಲ್ಲಿ ಬ್ಯುಸಿನೆಸ್‌ ಮಾಡಿರುವ ಖುಷಿಯಲ್ಲಿದೆ ‘ಕೆಜಿಎಫ್‌ 2’ ಚಿತ್ರತಂಡ.

https://youtube.com/playlist?list=PLTMWHXPzg7zC6GWbepothj3I006OCr726

ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ಇದೇ ದಿಲ್‌ ರಾಜು ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ತೆಲುಗು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದಿಲ್‌ ರಾಜು ಅವರು ಕನ್ನಡದಿಂದ ಯಶ್‌, ವಿಜಯ್‌ ಕಿರಗಂದೂರು ಅವರನ್ನೂ ಸಹ ಅಹ್ವಾನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.



Wednesday, February 17, 2021

‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್



‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್  


 ‘ಮುಂದಿನ ಕೆಲ ದಿನಗಳವರೆಗೆ ಕನ್ನಡ ಸಿನಿಮಾಗಳನ್ನ ಒಪ್ಪಿಕೊಳ್ಳುವುದಿಲ್ಲ’ ಎಂದು ತಾನೂ ಮಾಡಿದ್ದ ಟ್ವೀಟ್ ಬಗ್ಗೆ ನಟಿ ಶೃತಿ ಹಾಸನ್ ಸ್ಪಷ್ಟನೆ ನೀಡಿದ್ದಾರೆ.


ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಶನ್ ನಲ್ಲಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿರುವ ಸಲಾರ್ ಚಿತ್ರಕ್ಕೆ ಶೃತಿ ಹಾಸನ್ ನಾಯಕಿಯಾಗಿದ್ದಾರೆ. ಈ ಸುದ್ದಿ ಹೊರಬೀಳುತ್ತಲೇ ಶೃತಿ ಹಾಸನ್ 2017 ರಲ್ಲಿ ಕನ್ನಡ ಚಿತ್ರಗಳ ಕುರಿತು ಮಾಡಿದ್ದ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಅದು 2017. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ನಾಯಕಿ ಪಾತ್ರಕ್ಕೆ ಬಹುಭಾಷಾ ನಟಿ ಶೃತಿ ಹಾಸನ್ ಅವರಿಗೆ ಅಪ್ರೋಚ್ ಮಾಡಲಾಗಿತ್ತು. ಶೃತಿ ಈ ಚಿತ್ರದಲ್ಲಿ ನಟಿಸಬಹುದು ಎನ್ನುವ ನಿರೀಕ್ಷೆ ಕನ್ನಡ ಸಿನಿ ರಸಿಕರಲ್ಲಿತ್ತು. ಒಂದು ಹಂತದಲ್ಲಿ ಶೃತಿ ಹಾಸನ್ ಪೊಗರು ಚಿತ್ರಕ್ಕೆ ಫೈನಲ್ ಆಗಿದ್ದಾರೆ ಎನ್ನುವ ಟಾಕ್ ಕೂಡ ಜೋರಾಗಿ ಕೇಳಿ ಬಂದಿತ್ತು. ಆದರೆ, ಈ ಚಿತ್ರದಲ್ಲಿ ನಟಿಸಲು ಶೃತಿ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ಟ್ವಿಟ್ ಮಾಡಿ, ‘ಮುಂದಿನ ಕೆಲ ದಿನಗಳವರೆಗೆ ನಾನೂ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಚನೆಯಲ್ಲಿಲ್ಲ. ಪೊಗರು ಚಿತ್ರದ ಬಗ್ಗೆ ನನ್ನ ಜತೆ ಯಾರೂ ಕೂಡ ಮಾತಾಡಿಲ್ಲ ಎಂದಿದ್ದಾರೆ.

Restolex ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ದುರಂತ

 ನೆಲಮಂಗಲ ಸಮೀಪದ ಟಿ ಬೇಗೂರು ಗ್ರಾಮದಲ್ಲಿ Restolex ಎಂಬ ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಮಿಷನರಿ, ಕಚ್ಛಾ ಮತ್ತು ಸಿದ್...