Sunday, January 9, 2022

ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ತಪ್ಪಿದ ಬಾರಿ ಅವಘಡ

 ನೆಲಮಂಗಲದಲ್ಲಿನ ಲೋಹಿತ್ ನಗರದ ಸ್ವಸ್ತಿಕ್ ಮಿಲ್ನಲ್ಲಿ ಬೆಂಕಿ ಆಕಸ್ಮಿಕ



ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳ ಮಿಂಚಿನ ಕಾರ್ಯಾಚರಣೆಯಿಂದ ತಪ್ಪಿದ ಬಾರಿ ಅವಘಡ.

Thursday, November 18, 2021

ಉರಿಯುತ್ತಿದ್ದ ಕಾರಿನ ಬೆಂಕಿಯನ್ನು ನಂದಿಸುವಾಗ ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್

 ಬುಧವಾರ 17/11/2021

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಬುಧವಾರ 17/11/2021ರ ತಡರಾತ್ರಿ ಮನೆಯ ಗೇಟ್​ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ.


ಬುಧವಾರ ತಡರಾತ್ರಿ ಮನೆಯ ಗೇಟ್​ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಉರಿಯುತ್ತಿದ್ದ ಕಾರನ್ನ ನಂದಿಸುವಾಗಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ. ಬೆಂಕಿ ನಂದಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿಯಿಂದ ಒಂದು ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ. ಕಿಶೋರ್ ಎಂಬುವರಿಗೆ ಸೇರಿದ ಮನೆ ಮತ್ತು ಕಾರು ಇದಾಗಿದೆ. ಹರೀಶ್, ರಾಜಶೇಖರ್ ಮತ್ತು ಮುತ್ತಪ್ಪ ಗಾಯಗೊಂಡಿರುವ ಅಗ್ನಿಶಾಮಕ ಸಿಬ್ಬಂದಿ.


ಏನಾಯ್ತು?: ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿಯಿಂದ ಕಾರು ಭಸ್ಮ ಪ್ರಕರಣದಲ್ಲಿ ಮೊದಲು ಮನೆಯಲ್ಲಿದ್ದ UPS ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆಗಳು ಇಡೀ ಮನೆಯನ್ನೇ ಆವರಿಸಿದೆ. ಬಳಿಕ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಹೊತ್ತಿದ ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ.



ಘಟನೆ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್‌ ಪಾರಾಗಿದ್ದಾರೆ. ಬೆಂಕಿ ಬಿದ್ದ ಕೂಡಲೇ ಟೆರೇಸ್ ಮೂಲಕ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಟೆರೇಸ್‌ನಲ್ಲಿದ್ದ ಗೇಟ್ ಒಡೆದ ಈ ಮೂವರೂ, ಪಕ್ಕದ ಬಿಲ್ಡಿಂಗ್‌ಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಮನೆ, ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ.


Sunday, October 31, 2021

Miss you ಅಪ್ಪು ಅಣ್ಣ,


 ಕೆಲವು ಸಾವುಗಳು ನಮಗೆ ಸಂಬಂಧ ಇಲ್ಲದಿದ್ದರೂ ನಮ್ಮನ್ನೇ ಮೌನವಾಗಿಸುತ್ತವೆ, ಅಪ್ಪು ಅಣ್ಣನ್ನ ಒಂದ್ಸಾರಿನೂ ಭೇಟಿಯಾಗ್ದೇನೇ ಮಾತಾಡ್ದೆನೇ ಇದ್ರೂನು ಜನ ಇವತ್ತು ಅಳ್ತಾರೆ ಅಂದ್ರೆ ಜೀವನ್ದಲ್ಲಿ ಮುಖ್ಯವಾಗಿರೋದು ವ್ಯಕ್ತಿಯಲ್ಲ ವ್ಯಕ್ತಿತ್ವ. ನಾವ್ ಅವ್ರ ತರ ಎಲ್ಲಾ ಇರಕ್ಕಾಗಲ್ಲ ಅಂದ್ರು atleast time ಕೊಡೋರಿಗೆ time ಕೊಡಿ, ಪ್ರೀತಿ ಕೊಡೋರಿಗೆ ಪ್ರೀತಿ ಕೊಡಿ, ಹಣ ಎಷ್ಟಿದ್ದರೇನು ಋಣ ಇದ್ದಷ್ಟೇ ಜೀವನ, ಯಾಕಂದ್ರೆ ಬದುಕಿದ್ದಾಗಲೇ ಪ್ರೀತಿ ತೋರಿಸ್ಬೇಕು, ಕಳೆದುಕೊಂಡ ಮೇಲೆ ಬರೀ ನೆನಪಷ್ಟೇ, ಇವತ್ತು ಅಪ್ಪು ಅಣ್ಣ ನಾಳೆ ನಾವು ನೀವು.

Saturday, October 30, 2021

ನಮ್ಮಿಂದ ಈ ನಗು ಕಿತ್ತುಕೊಂಡ ದೇವರಿಗೆ ಧಿಕ್ಕಾರ

ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಎಲ್ಲರ ಪ್ರೀತಿಯ ಅಪ್ಪು ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಆ ನಗು, ಆ ಧ್ವನಿ, ಅವರ ಸರಳ ವ್ಯಕ್ತಿತ್ವ ಮತ್ತು ನೊಂದವರಿಗೆ ಸಹಾಯಾಸ್ತ ಚಾಚುವ ಗುಣ ಹಾಗೂ ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುತ್ತಿದ್ದ ಪುನೀತ್​​ಗೆ ಪುನೀತನೇ ಸರಿಸಾಟಿ.


ನಮ್ಮಿಂದ ಶಾರೀರಿಕವಾಗಿ ದೂರವಾಗಿರುವ ಪುನೀತ್​, ಅವರು ಬಿಟ್ಟು ಹೋಗಿರುವ ಮೌಲ್ಯ, ಪ್ರೀತಿ ಹಾಗೂ ನಗುವಿನ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ.



ಪ್ರತಿಯೊಂದು ಚಿತ್ರದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದ ಅಪ್ಪು ಕರ್ನಾಟಕದ ಮನೆ ಮಗನಾಗಿದ್ದಾರು. ಅಪ್ಪನ ನಡೆಯನ್ನೇ ಅನುಸರಿಸಿದ ಅಪ್ಪು ಎಲ್ಲರ ಹೃದಯದಲ್ಲೂ ಮನೆ ಮಾಡಿದ್ದರು. ಸಾಕಷ್ಟು ಅನಾಥಾಶ್ರಮ, ವೃದ್ಧಾಶ್ರಮ, ಹೆಣ್ಣು ಮಕ್ಕಳು ಶಿಕ್ಷಣ ಸೇರಿದಂತೆ ಲೆಕ್ಕವಿಲ್ಲದಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ ಧೀಮಂತ ವ್ಯಕ್ತಿ ಇಂದು ನಮ್ಮ ಮುಂದೆ ಇಲ್ಲದಿರುವುದು, ಸಮಾಜಕ್ಕೆ ಆದ ಬಹು ದೊಡ್ಡ ನಷ್ಟವಾಗಿದೆ. ಕೆಲವರು ಪುನೀತ್​ ಅವರಲ್ಲಿ ದೇವರನ್ನು ಕಂಡಿದ್ದಾರೆ. ಅಂತಹ ಮಹಾನ್​ ಚೇತನ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಿಜಕ್ಕೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಇದೊಂದು ಕನಸಾಗಿ ಬಿಡಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿರುವುದಂತೂ ಸತ್ಯ.


ಇನ್ನು ಅಪ್ಪು ವ್ಯಕ್ತಿತ್ವ ಎಂಥದ್ದು ಎನ್ನುವುದನ್ನು ಅವರ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ ನೀನೆ ರಾಜಕುಮಾರ' ಹಾಡು ಸಾರಿ ಸಾರಿ ಹೇಳುತ್ತದೆ. ಚಿತ್ರರಂಗದಲ್ಲಿ ರಾಜನಂತೆ ಮೆರೆದ ಅಪ್ಪು, ಎಷ್ಟೋ ಮನೆಗೆ ಹೊಸ ಬೆಳಕಾಗಿ, ಎಷ್ಟೋ ಮನಗಳ ನೋವ ನೀಗಿಸಿ ದೀಪವಾಗುವ ಮೂಲಕ ಎಲ್ಲರು ಆರಾಧಿಸುವ ರಾಜರತ್ನನಾಗಿದ್ದಾರೆ.


ಸಾಕಷ್ಟು ಸೋಲು-ಗೆಲುವುಗಳನ್ನು ಕಂಡಿರುವ ಪುನೀತ್, ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು ಎನ್ನುವಂತೆ ಜೀವನದಲ್ಲಿ ಎಂದು ಕುಗ್ಗಲಿಲ್ಲ. ವರ್ಷಕ್ಕೆ ಎರಡ್ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಪುನೀತ್​ ಈ ಮೂಲಕ ಪರೋಕ್ಷವಾಗಿ ಸಾಕಷ್ಟು ಜನರ ಜೀವನಕ್ಕೆ ಆಸರೆಯಾಗಿದ್ದರು. ಎಂದು ಯಾರ ಮುಂದೆಯು ಸೋಲದ ಪುನೀತ್​, ಎಲ್ಲರ ರಾಜಕುಮಾರನೇ ಸರಿ. ​


ತಂದೆ ಮೇರು ನಟನಾದರೂ ಅಪ್ಪುಗೆ ಅದರ ಬಗ್ಗೆ ಅಹಂ ಎಂದೂ ಇರಲಿಲ್ಲ. ತುಂಬಾ ಸರಳ ವ್ಯಕ್ತಿಯಾದ ಪುನೀತ್​, ಗುಡಿಸಲೇ ಆಗಲಿ, ಅರಮನೆ ಆಗಲಿ ಎಂದು ಆಟ ನಿಲ್ಲದು ಎನ್ನುವಂತೆ ಎಲ್ಲರೊಂದಿಗೆ ಬೆರೆತು ಸಾಮಾನ್ಯ ವ್ಯಕ್ತಿಯಂತೆ ಜೀವಿಸಿದವರು. ಅದಕ್ಕೆ ಉದಾಹರಣೆಯಾಗಿ ಕೆಲವೇ ದಿನಗಳ ಹಿಂದೆ ಡಾಕ್ಯುಮೆಂಟರಿ ಶೂಟಿಂಗ್​ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್​, ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು ಊರುಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪುನೀತ್​ ಅವರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಕುರಿಗಾಯಿಗಳು ನೀಡಿದ ಸಂಗಟಿ‌ ಸವಿದು ‌ಸಂಭ್ರಮಿಸಿದ್ದರು. ಇದಕ್ಕೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಪುನೀತ್​ ಸರಳತೆ ಕಂಡು ಭಾವುಕರಾಗಿದ್ದರು.


ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧವ ತೋರದು ಎಂದು ಬೇಧ ತೋರದು ಎಂಬ ಸಾಲು ಅಪ್ಪು ವ್ಯಕ್ತಿತ್ವದಿಂದಲೇ ಹುಟ್ಟಿಕೊಂಡಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಭೆ, ಸಮಾರಂಭಗಳಿಗೆ ಹೋದರು ಪುನೀತ್​ ಹಿರಿಯರಿಗೆ ಗೌರವ ಸೂಚಿಸುತ್ತಿದ್ದರು. ತಮಗಿಂತ ಕಿರಿಯವರನ್ನು ಕೂಡ ಗೌರವ ಕೊಟ್ಟೆ ಮಾತನಾಡಿಸುತ್ತಿದ್ದರು. ನಾನೊಬ್ಬ ಸ್ಟಾರ್​ ಎಂಬುದನ್ನು ಎಂದಿಗೂ ಜನರ ಮುಂದೆ ಅಪ್ಪು ತೋರಿಸಿಕೊಂಡವರಲ್ಲ.


ಪುನೀತ್​ಗೆ ಯಾವುದರಲ್ಲೂ ಕಡಿಮೆ ಆಗಿರಲಿಲ್ಲ. ಸಾಕಷ್ಟು ಹಣವಿದ್ದರೂ ಅದನ್ನು ಮೀರಿಸುವಷ್ಟು ಹೃದಯ ಶ್ರೀಮಂತ್ರಿಕೆಯನ್ನು ಹೊಂದಿದ್ದರು. ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿ ತೋರಿದಂತಹ ವ್ಯಕ್ತಿತ್ವ. ತೆರೆಯ ಹಿಂದೆ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ ಅಪ್ಪು ಅವರದ್ದು ಆಕಾಶ ನೋಡದ ಕೈ. ಅವರಿದ್ದ ಕಡೆಯಲೆಲ್ಲ ಪ್ರೀತಿ ಹಂಚಿವುದೇ ಅವರ ಬೆಲೆ ಕಟ್ಟಲಾಗದ ಗುಣ.


ಜೊತೆಗಿರು ನೀನು ಅಪ್ಪನ ಹಾಗೆ, ಹಣ್ಣೆಲೆ ಕಾಯೊ ವಿನಯಿದಿ ಹೀಗೆ ಎಂಬಂತೆ ಹೆತ್ತ ಮಕ್ಕಳಿಂದ ದೂರಾದ ಅನೇಕ ಹಿರಿಯರಿಗೆ ಮಗ ಹಾಗೂ ತಂದೆಯ ಸ್ಥಾನದಲ್ಲಿ ನಿಂತು ಅವರ ಕೊನೆಯ ಕಾಲದ ಜೀವನ ಸುಖಮಯವಾಗಿಸಿದವರಲ್ಲಿ ಪುನೀತ್​ ಒಂದು ಹೆಜ್ಜೆ ಮುಂದು. ಸಾಕಷ್ಟು ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸುತ್ತಿರುವ ಪುನೀತ್ ಅನೇಕರ ಬಾಳಿನ ಭರವಸೆ ಆಗಿದ್ದರು. ​


ನಿಜಕ್ಕೂ ನಿನ್ನನು (ಪುನೀತ್​) ಪಡೆದ ನಾವು ಪುನೀತರೇ.. ಸದಾ ಕಾಲ ನಗು ನಗುತ ಬಾಳು ಎಂದು ಹಾರೈಸಿದ ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ. ಅರ್ಧಕ್ಕೆ ಅನೇಕರನ್ನು ಅನಾಥರನ್ನಾಗಿ ಮಾಡಿ ಹೊರಟರು ಅಪ್ಪು. ನಿಜಕ್ಕೂ ಈ ಸಾವು ನ್ಯಾಯವೇ? ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಂತೆ ಬಹುತೇಕರ ಪಾಲಿಗೆ ಪುನೀತ್​ ನಂದಾ ದೀಪವಾಗಿದ್ದರು. ಆದರೆ, ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು ನಿಂತಿದೆ ಮತ್ತು ಸಮಯದ ಸೂತ್ರ ಅವನದು (ದೇವರು) ಎನ್ನುವ ಮಾತು ಅಪ್ಪು ವಿಚಾರದಲ್ಲೂ ನಿಜವಾಯಿತು. ಆದರೆ, ಇನ್ನಷ್ಟು ವರ್ಷ ನಮ್ಮನ್ನು ರಂಜಿಸುತ್ತಾರೆ ಅಂದುಕೊಂಡಿದ್ದಾಗಲೇ ದೇವರು ಅವರ ಪಾತ್ರವನ್ನು ಮುಗಿಸಿ ಬೇಗ ಕರೆಸಿಕೊಂಡುಬಿಟ್ಟ. ಹೀಗಾಗಿಯೇ ಇಂದು ಅಸಂಖ್ಯಾತ ಜನರು ದೇವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.


ಏನೇ ಆದರೂ ಬೊಂಬೆ ಹೇಳಿದ ಒಂದು ಮುತ್ತಿನ ಕಥೆಯಯಲ್ಲಿದ್ದ ರಾಜ, ಈ ರಾಜಕುಮಾರನೇ. ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೆ ಉಳಿವುದು ಕೊನೆಗೆ ಎನ್ನುವಂತೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಲ್ಲಿ ಎಂದಿಗೂ ಆರದ ದೀಪವಾಗಿಯೇ ಅಪ್ಪು ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಈ ಜಗತ್ತಿಗೆ ಸೂರ್ಯನು ಒಬ್ಬನೇ, ಚಂದ್ರನು ಒಬ್ಬನೇ ಕನ್ನಡ ಚಿತ್ರರಂಗಕ್ಕೆ ಈ ರಾಜನೂ ಒಬ್ಬನೇ. ಬೊಂಬೆ ಹೇಳುತೈತೆ ಮತ್ತೆ…. ಹೇಳುತೈತೆ ನೀನೆ ರಾಜಕುಮಾರ….


ಹಾಡಿನ ಸಂಪೂರ್ಣ ಸಾಲು


ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ

ನೀನೆ ರಾಜಕುಮಾರ


ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ

ನೀನೆ ರಾಜಕುಮಾರ


ಹೊಸ ಬೆಳಕೊಂದು ಹೊಸಿಲಿಗೆ ಬಂದು

ಬೆಳಗಿದ ಮನೆಯ ಮನಗಳ ಇಂದು

ಆರಾಧಿಸೊ ರಾರಾಧಿಸೊ ರಾಜರತ್ನನು


ಆಡಿಸಿಯೆ ನೋಡು ಬೀಳಿಸಿಯೆ ನೋಡು

ಎಂದು ಸೋಲದು ಸೋತು ತಲೆಯ ಬಾಗದು


ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ

ನೀನೆ ರಾಜಕುಮಾರ


ಗುಡಿಸಲೆ ಆಗಲಿ ಅರಮನೆ ಆಗಲಿ

ಆಟವೆ ನಿಲ್ಲದು

ಎಂದು ಆಟ ನಿಲ್ಲದು

ಹಿರಿಯರೆ ಇರಲಿ ಕಿರಿಯರೆ ಬರಲಿ

ಬೇಧವೆ ತೋ ರದು ಎಂದು ಬೇಧ ತೋರದು


ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ

ಆಕಾಶ ನೋಡದ ಕೈಯ ನಿನದು

ಪ್ರೀತಿ ಹಂಚಿರುವ


ಜೊತೆಗಿರು ನೀನು ಅಪ್ಪನ ಹಾಗೆ

ಹಣ್ಣೆಲೆ ಕಾಯೊ ವಿನಯಿದಿ ಹೀಗೆ


ನಿನ್ನನು ಪಡೆದ ನಾವು ಪುನೀತ

ಬಾಳು ನಗು ನಗುತ


ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ

ನೀನೆ ರಾಜಕುಮಾರ


ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು

ನಂದಾ ದೀಪವೇ ಇದು

ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು

ಸಮಯದ ಸೂತ್ರ ಅವನದು


ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ

ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ


ಯೋಗವು ಒಮ್ಮೆ ಬರುವುದು ನಮಗೆ

ಯೋಗ್ಯತೆ ಒಂದೆ ಉಳಿವುದು ಕೊನೆಗ


ಸೂರ್ಯನೊಬ್ಬ ಚಂದ್ರನೊಬ್ಬ

ರಾಜನೂ ಒಬ್ಬ

ಈ ರಾಜನೂ ಒಬ್ಬ


ಆಡಿಸಿಯೆ ನೋ ಡು ಬೀಳಿಸಿಯೆ ನೋಡು

ಎಂದು ಸೋಲದು ಸೋತು ತಲೆಯ ಬಾಗದು


ಬೊಂಬೆ ಹೇಳುತೈತೆ

ಮತ್ತೆ ಹೇಳುತೈತೆ

ನೀನೆ ರಾಜಕುಮಾರ

Tuesday, October 26, 2021

ದೀಪಾವಳಿ ಹಬ್ಬದಂದು ಎಲ್ಲಾ ದೇವಸ್ಥಾನದಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶ

 ದೀಪಾವಳಿ ಹಬ್ಬದಂದು ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನದಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶ ನೀಡಿದೆ

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ನವೆಂಬರ್‌ 5ರಂದು ಆಚರಣೆ ಮಾಡುವ ಬಲಿಪಾಡ್ಯಮಿಯಂದು ಗೋವಿನ ಪೂಜೆಯನ್ನು ಅಂದು ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಪೂಜೆ ಮಾಡುವಂತೆ ಆದೇಶ ನೀಡಲಾಗಿದೆ.

ಬಲಿ ಪಾಡ್ಯಮಿಯಂದು ನಡೆಯುವ ಗೋ ಪೂಜೆ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ.ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ನಡೆದು ಬಂದಿದೆ.m

ಮಹಾಭಾರತದ ಕಾಲಘಟ್ಟದಲ್ಲಿ ಕಾರ್ತಿಕ ಶುದ್ಧ ಪಾಡ್ಯದ ದಿನದಂದು ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋಪಾಲಕರಿಗೆ ರಕ್ಷಣೆ ನೀಡಿದ ಎಂಬ ಪ್ರತೀತಿಯೂ ಇದೆ. ಈ ದಿನದಂದು ಗೋವರ್ಧನ, ಗೋ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಕೃಷ್ಣ, ಗೋಪ-ಗೋಪಿಯರ, ಇಂದ್ರ, ಹಸುಗಳ, ಕರುಗಳ ಚಿತ್ರಗಳನ್ನು ಜೋಡಿಸಿ ಮೆರವಣಿಗೆ ಮಾಡುತ್ತಾರೆ. ಗೋಪೂಜೆಯನ್ನು ಬಲಿಪಾಡ್ಯಮಿ ದಿನದಂದು ಆಚರಣೆ ಮಾಡಲಾಗುತ್ತದೆ. ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶ.

Saturday, October 23, 2021

14ವರ್ಷದ ಬಳಿಕ ಮತ್ತೆ ಹೆಚ್ಚಾಗ್ತಿದೆ ಬೆಂಕಿ ಪೊಟ್ಟಣದ ಬೆಲೆ ✨️🔥

ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ ಸರದಿ. ಬೆಂಕಿ ಪೊಟ್ಟಣದ ಬೆಲೆ ಏರಿಕೆ ಕಾಣಲಿದೆ.


.

ತಮಿಳುನಾಡಿನ ಶಿವಕಾಶಿಯಲ್ಲಿ ಐದು ಪ್ರಮುಖ ಬೆಂಕಿಪೊಟ್ಟಣದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಬೆಂಕಿ ಪೊಟ್ಟಣದ ಬೆಲೆ ಏರಲಿದೆ. ಒಂದು ರೂಪಾಯಿಯಿದ್ದ ಬೆಲೆ 2 ರೂಪಾಯಿಯಾಗಲಿದೆ.

2007ರಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಲಾಗಿತ್ತು. 50 ಪೈಸೆಯಿದ್ದ ಬೆಲೆಯನ್ನು 1 ರೂಪಾಯಿಗೆ ಏರಿಸಲಾಗಿತ್ತು. 14 ವರ್ಷದ ನಂತ್ರ ಪೊಟ್ಟಣದ ಬೆಲೆ ಹೆಚ್ಚಾಗ್ತಿದೆ. ಬೆಂಕಿಕಡ್ಡಿಗಳನ್ನು ತಯಾರಿಸಲು 14 ರೀತಿಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಈ ಎಲ್ಲಾ ಕಚ್ಚಾ ವಸ್ತುಗಳ ಬೆಲೆಗಳು ಸಾಕಷ್ಟು ಹೆಚ್ಚಾಗಿದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಕೆಂಪು ರಂಜಕದಿಂದ ಹಿಡಿದು, ಮೇಣ, ಬಾಕ್ಸ್ ಬೋರ್ಡ್, ಪೇಪರ್, ಸ್ಪ್ಲಿಂಟ್ಸ್, ಪೊಟಾಶಿಯಂ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಇದ್ರಿಂದ ಬೆಂಕಿಪೊಟ್ಟಣದ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ.

Monday, September 13, 2021

ಪ್ರಾಣದ ಹಂಗು ತೊರೆದು ಪೇಂಟರ್ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಎಂ

 ನೆಲಮಂಗಲ: ಏಪ್ರಿಲ್ 07 2020

ಬಣ್ಣ ಬಳಿಯಲು ಹೋಗಿ ಸುಮಾರು 12 ಅಡಿ ಆಳದ ನೀರಿನ ಸಂಪ್‍ಗೆ ಬಿದ್ದು ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದವರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಪ್ರಾಣದ ಹಂಗು ತೊರೆದು ರಕ್ಷಿಸಿ ಹೀರೋ ಆಗಿದ್ದಾರೆ.


ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ಘಟನೆ ನಡೆದಿದ್ದು, ಉಸಿರಾಟದ ತೊಂದರೆಯಿಂದ ನರಳಾಡುತ್ತಿದ್ದ ಪೇಂಟರ್ ಹಾಗೂ ಆತನ ರಕ್ಷಣೆಗೆ ಇಳಿದಿದ್ದ ವ್ಯಕ್ತಿ ಒಟ್ಟು ಇಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ರಕ್ಷಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಒಟ್ಟು ಒಬ್ಬರು ಪೇಂಟರ್ಸ್ ಸಂಪ್‍ಗೆ ಇಳಿದಿದ್ದರು. ಒಬ್ಬರು ಹೇಗೋ ಮೇಲಕ್ಕೆ ಬಂದಿದ್ದಾರೆ. ಆದರೆ ಓರ್ವ ಸಂಪ್‍ನಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಉಸಿರಾಟದ ತೊಂದರೆಯಿಂದ ಪೇಂಟರ್ ಅಸ್ವಸ್ಥರಾಗಿದ್ದಾರೆ. ಪೇಂಟರ್ ರಕ್ಷಣೆ ಮಾಡಲು ಇಬ್ಬರು ಸಂಪ್‍ಗೆ ಇಳಿದಿದ್ದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಸಹ ರಕ್ಷಣೆಗಾಗಿ ಇಳಿದಿದ್ದ ಇಬ್ಬರ ಪೈಕಿ ಒಬ್ಬರು ಸಂಪ್ ನಲ್ಲಿ ಸಿಲುಕಿದ್ದರು. ಮತ್ತೊಬ್ಬರು ಮೇಲಕ್ಕೆ ಬಂದಿದ್ದರು.

ವಿಷಯ ತಿಳಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ನೀರಿನ, ಸಂಪ್‍ಗೆ ಹಿಳಿದು ಇಬ್ಬರನ್ನೂ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಕಿರಿದಾದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ ರೇವಣ್ಣ ಹೀರೋ ಹಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರೇವಣ್ಣ, ಆಕ್ಸಿಜನ್ ಅಳವಡಿಸಿಕೊಂಡು ಧೈರ್ಯದಿಂದ ನೀರಿನ ಸಂಪ್‍ಗೆ ಇಳಿದು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

ರಕ್ಷಿಸಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tuesday, March 9, 2021

ಕರುನಾಡ ದೀಪ 🪔 ಸುಭಾಷಿತ

 


YASH: ಮತ್ತೊಂದು ಹೊಸ ದಾಖಲೆ ಬರೆದ ರಾಕಿಂಗ್​ಸ್ಟಾರ್​ ಯಶ್

KGF ಮೂಲಕ ನಟ ಯಶ್​ ಪ್ಯಾನ್​ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ತಮ್ಮ ಸಿನಿಮಾದ ಮೂಲಕ ದಾಖಲೆ ನಿರ್ಮಿಸಿರುವ ಅವರು ಈಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.

ನಟ ಯಶ್ ಪ್ರಸ್ತುತ ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಕೆಜಿಎಫ್​ ಚಿತ್ರದ ಮೂಲಕ ದೇಶದ ಎಲ್ಲಾ ಅಭಿಮಾನಿಗಳನ್ನು ಹೊಂದಿದ ಹಿನ್ನಲೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ. ಹಿಂದಿ, ತೆಲುಗಿನಲ್ಲಿ ಮಿಂಚಿರುವ ನಟ ಕಿಚ್ಚ ಸುದೀಪ್​ 1.1 ಮಿಲಿಯನ್​ ಅಭಿಮಾನಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ 854 ಸಾವಿರ ಅಭಿಮಾನಿಗಳನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ.ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ 1.3 ಮಿಲಿಯನ್​ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ರಕ್ಷಿತ್​ ಶೆಟ್ಟಿ 824 ಸಾವಿರ ಅಭಿಮಾನಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಧ್ರುವ ಸರ್ಜಾ 25.4 ಸಾವಿರ ಅಭಿಮಾನಿ ಹೊಂದಿದ್ದಾರೆ. ನಟ ಚಿರಂಜೀವಿ ಅಗಲಿಕೆಯಾದರೂ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. ಈಗಲೂ ಅವರ ಖಾತೆಯಲ್ಲಿ 345 ಸಾವಿರ ಅಭಿಮಾನಿಗಳಿದ್ದಾರೆ.






Monday, February 22, 2021

ಕೆಜಿಎಫ್‌2: ತೆಲುಗು ಹಕ್ಕು 65 ಕೋಟಿ ರು.ಗೆ ಮಾರಾಟ

ತೆಲುಗಿನ ಖ್ಯಾತ ನಿರ್ಮಾಪಕ ದಿಲ್‌ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್‌ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ‘ಕೆಜಿಎಫ್‌ 2’ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಯ ಪೂರ್ವ ಬ್ಯುಸಿನೆಸ್‌ಗೆ ಮುಂದಾಗಿದ್ದು, ಅದರ ಮೊದಲ ಭಾಗವೆಂಬಂತೆ ತೆಲುಗಿನಲ್ಲಿ ಈ ಚಿತ್ರದ ಬಿಡುಗಡೆಯ ಹಕ್ಕುಗಳನ್ನು 65 ಕೋಟಿ ರು.ಗೆ ಮಾರಾಟ ಮಾಡಲಾಗಿದೆ.

https://youtube.com/playlist?list=PLTMWHXPzg7zC6GWbepothj3I006OCr726


ತೆಲುಗಿನ ಖ್ಯಾತ ನಿರ್ಮಾಪಕ ದಿಲ್‌ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್‌ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆ ನೋಡಿದರೆ ಈ ಚಿತ್ರದ ಬಿಡುಗಡೆ ಹಕ್ಕುಗಳಿಗಾಗಿ ಸಾಕಷ್ಟುನಿರ್ಮಾಪಕರು ಸಾಲಿನಲ್ಲಿ ನಿಂತಿದ್ದರು. ಅದಕ್ಕೆ ಕಾರಣ ಚಾಪ್ಟರ್‌ 1 ಯಶಸ್ಸು. ಅಮೆಜಾನ್‌ ಪ್ರೈಮ್‌ ಸೇರಿದಂತೆ ಡಿಜಿಟಲ್‌ ಮಾರುಕಟ್ಟೆಯಲ್ಲಿ ಈ ಚಿತ್ರ ಮಾಡಿದ ಗಳಿಕೆ. ಈ ಹಿಂದೆ ವರಾಹಿ ಚಲನಚಿತ್ರಂ ಬ್ಯಾನರ್‌ ‘ಕೆಜಿಎಫ್‌ 1’ರ ಬಿಡುಗಡೆಯ ಹಕ್ಕುಗಳನ್ನು ಕೇವಲ 5 ಕೋಟಿಗೆ ಕೊಂಡು, 12 ಕೋಟಿ ಲಾಭ ಮಾಡಿತ್ತು. ಟೀವಿ ಹಕ್ಕುಗಳಲ್ಲೂ ಎರಡು ಪಟ್ಟು ಲಾಭ ಮಾಡಿಕೊಂಡಿದ್ದರು. ಚಾಪ್ಟರ್‌ 1ರ ಬ್ಯುಸಿನೆಸ್‌ ನೋಡಿಯೇ ಚಾಪ್ಟರ್‌ 2 ಬಿಡುಗಡೆಯ ಹಕ್ಕುಗಳಿಗಾಗಿ ಹಲವು ನಿರ್ಮಾಪಕರು ಮುಂದೆ ಬಂದಿದ್ದರು. ಆದರೆ, ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಹೇಳಿದ ರೇಟು ಕೇಳಿ ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೌದು, ಮೊದಲಿಗೆ 70 ಕೋಟಿಗೆ ಬೇಡಿಕೆ ಇಟ್ಟಿದ್ದರು ನಿರ್ಮಾಪಕರು. ‘ಎರಡೂ ತೆಲುಗು ರಾಜ್ಯಗಳ ಬಿಡುಗಡೆ ಹಕ್ಕುಗಳಿಗಾಗಿ ಇಷ್ಟೊಂದು ಮೊತ್ತವೇ’ ಎಂದು ಹಲವು ನಿರ್ಮಾಪಕರು ಮಾತನಾಡಿಕೊಂಡಿದುಂಟು.

ನಿರೀಕ್ಷೆಗೂ ಮೀರಿ ವಿತರಣೆಯ ರೈಟ್ಸ್‌ನಲ್ಲಿ ಸದ್ದು ಮಾಡುತ್ತಿದ್ದ ‘ಕೆಜಿಎಫ್‌ 2’ ಚಿತ್ರದ ವ್ಯವಹಾರಕ್ಕೆ ಕೈ ಹಾಕದೆ ಹಲವರು ಸುಮ್ಮನಿದ್ದಾಗ ದಿಲ್‌ ರಾಜು ಮಾತ್ರ ಧೈರ್ಯ ಮಾಡಿ 70 ಕೋಟಿಯನ್ನು 65 ಕೋಟಿ ರು.ಗೆ ಇಳಿಸಿಕೊಂಡು ರೈಟ್ಸ್‌ ತೆಗೆದುಕೊಂಡಿದ್ದಾರೆ. ಆ ಮೂಲಕ ತೆಲುಗಿನ ಬಹು ದೊಡ್ಡ ನಿರ್ಮಾಪಕ ಹಾಗೂ ವಿತರಕನ ಕೈಗೆ ಯಶ್‌ ಚಿತ್ರ ಸೇರಿಕೊಂಡಿದೆ. ಅಂದಹಾಗೆ 65 ಕೋಟಿ ರು.ಗೆ ವ್ಯವಹಾರ ಪಕ್ಕಾ ಮಾಡಿಕೊಂಡಿರುವ ದಿಲ್‌ ರಾಜು, ಈಗಾಗಲೇ ನಿರ್ಮಾಪಕರಿಗೆ ಮುಂಗಡವಾಗಿಯೂ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ. ಕನ್ನಡ ಸ್ಟಾರ್‌ ನಟನೊಬ್ಬನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೂ ಮೊದಲೇ ಈ ರೀತಿ ಬ್ಯುಸಿನೆಸ್‌ ಮಾಡುತ್ತಿರುವುದು ನೋಡಿ ಟಾಲಿವುಡ್‌ ಕೂಡ ನಿಬ್ಬೆರಗಾಗಿದೆ. ಸದ್ಯ ತಾವು ಅಂದುಕೊಂಡಂತೆ ಟಾಲಿವುಡ್‌ನಲ್ಲಿ ಬ್ಯುಸಿನೆಸ್‌ ಮಾಡಿರುವ ಖುಷಿಯಲ್ಲಿದೆ ‘ಕೆಜಿಎಫ್‌ 2’ ಚಿತ್ರತಂಡ.

https://youtube.com/playlist?list=PLTMWHXPzg7zC6GWbepothj3I006OCr726

ಇತ್ತೀಚೆಗೆ ಹೈದಾರಾಬಾದ್‌ನಲ್ಲಿ ಇದೇ ದಿಲ್‌ ರಾಜು ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ತೆಲುಗು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದಿಲ್‌ ರಾಜು ಅವರು ಕನ್ನಡದಿಂದ ಯಶ್‌, ವಿಜಯ್‌ ಕಿರಗಂದೂರು ಅವರನ್ನೂ ಸಹ ಅಹ್ವಾನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.



Restolex ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ದುರಂತ

 ನೆಲಮಂಗಲ ಸಮೀಪದ ಟಿ ಬೇಗೂರು ಗ್ರಾಮದಲ್ಲಿ Restolex ಎಂಬ ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಮಿಷನರಿ, ಕಚ್ಛಾ ಮತ್ತು ಸಿದ್...