| #revannam #Saragur Konda #ಸರಗೂರು ಕೊಂಡ |
300 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಇರುವ ಪುರಾಣ ಪ್ರಸಿದ್ಧವಾದ ಗುಡಿಸರಗೂರು ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾಮಹೋತ್ಸವ, ಕೊಂಡ ಹಾಗೂ ತೆಪ್ಪೋತ್ಸವವು 14-15 ಫೆಬ್ರವರಿ 2022ರ ಸೋಮವಾರ ಮತ್ತು ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆದಿರುತ್ತದೆ.
| #revannam #Saragur Konda #ಸರಗೂರು ಕೊಂಡ |
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಒಡನಾಡಿಯಾಗಿದ್ದ ನಾಗರಾಜ್ ಪಕ್ಷ ನಿಷ್ಠೆಗೆ ಹೆಸರುವಾಸಿಯಾಗಿದ್ದರು. 2011ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ಪರ್ಧಿಸಿದ್ದರು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಇಂದು ಸಂಜೆ ಸಿಂಗರಾಜಿಪುರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಪ್ರತಿಷ್ಠಿತ 67ನೇ ಫಿಲ್ಮ್ಫೇರ್ ಅವಾರ್ಡ್ಸ್ 2022 ಈ ಸಲ ಬೆಂಗಳೂರಿನಲ್ಲಿ ನಡೆಯಲಿದೆ. ಅಚ್ಚರಿಯ ವಿಚಾರ ಏನೆಂದರೆ, ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಅವಾರ್ಡ್ ಕಾರ್ಯಕ್ರಮ ನಡೆಯಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇದೇ ಅಕ್ಟೋಬರ್ 9ರಂದು 67ನೇ ಸೌತ್ ಫಿಲ್ಮ್ಫೇರ್ ಅವಾರ್ಡ್ಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೊದಲ ಸಲ ಆಯೋಜನೆಗೊಳ್ಳುತ್ತಿದೆ. ಸ್ಯಾಂಡಲ್ವುಡ್ ಇಂಡಸ್ಟ್ರಿಯ ಜತೆಗೆ ಸೌತ್ನ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ಮಂದಿಯೂ ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಬಾಲಿವುಡ್ನ ಕೆಲವರೂ ಆಗಮಿಸುತ್ತಿದ್ದಾರೆ.
ಕನ್ನಡದ ಪ್ರತಿಯೊಬ್ಬ ಹಿರಿಯ ನಟರಿಗೆ ಆಮಂತ್ರಣ..
ಇನ್ನು ಬೆಂಗಳೂರಿನಲ್ಲಿಯೇ ಈ ಸಲದ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದುಡಿದ ಪ್ರತಿಯೊಬ್ಬ ಹಿರಿಯ ನಟ-ನಟಿಯರಿಗೂ ಅವರ ಮನೆ ಮನೆಗೆ ತೆರಳಿ ಆಮಂತ್ರಣ ನೀಡಲಾಗಿದೆ. ಒಟ್ಟಾರೆಯಾಗಿ 20 ಸಾವಿರಕ್ಕೂ ಅಧಿಕ ಮಂದಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಪಬ್ಲಿಕ್ ವೀಕ್ಷಣೆಗೆ ಬುಕ್ ಮೈ ಶೋದಲ್ಲಿ ಟಿಕೆಟ್ ವ್ಯವಸ್ಥೆ ಇದೆ. ಫಿಲಂ ಚೇಂಬರ್ನಲ್ಲಿಯೂ ಸಾವಿರ ಟಿಕೆಟ್ ನೀಡಿದ್ದೇವೆ. ಸಂಜೆ 4.30ರಿಂದ ರೆಡ್ ಕಾರ್ಪೆಟ್ ಶುರುವಾದರೆ, ಮಧ್ಯರಾತ್ರಿವರೆಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಗ್ಯಾಸ್ ಸಿಲಿಂಡರ್ ಸೋರಿಕೆ: ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ!
ಗ್ಯಾಸ್ ಇಲ್ಲದೆ ಇಂದಿನ ದಿನಗಳಲ್ಲಿ ಅಡುಗೆ ಕೆಲಸಗಳು ನಡೆಯುವುದು ಅಸಾಧ್ಯವೆನ್ನಬಹುದು. ಹೆಚ್ಚಾಗಿ ಪ್ರತಿಯೊಂದು ಮನೆಯಲ್ಲಿ ಗ್ಯಾಸ್ ಇದ್ದೇ ಇರುತ್ತದೆ. ಇದನ್ನು ಬಳಸಲು ಸುಲಭ ಹಾಗೂ ವೇಗವಾಗಿ ಇದು ಅಡುಗೆ ಮಾಡಲು ನೆರವಾಗುವುದು.
ಎಲ್ ಪಿಜಿ ಗ್ಯಾಸ್ ಬೇಗೆ ಹೊತ್ತಿ ಉರಿಯುವುದು. ಗ್ಯಾಸ್ ಸೋರಿಕೆಯಿಂದಾಗಿ ಎರಡು ರೀತಿಯ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಗ್ಯಾಸ್ ನಿಂದಾಗಿ ಉಸಿರುಕಟ್ಟುವಿಕೆ
ಗ್ಯಾಸ್ ಸಿಲಿಂಡರ್ ನಲ್ಲಿ ಸ್ವಲ್ಪ ಪ್ರಮಾಣದ ಗ್ಯಾಸ್ ಇದ್ದರೆ ಆಗ ಅದನ್ನು ತೆಗೆಯುವ ಪ್ರಯತ್ನ ಮಾಡಬೇಡಿ. ಯಾಕೆಂದರೆ ಇದರಿಂದ ಬೆಂಕಿ, ಗಾಯ ಮತ್ತು ಸಾವು ಸಂಭವಿಸಬಹುದು. ಸಿಲಿಂಡರ್ ಬೇಡವಾದರೆ ಆಗ ನೀವು ಅದನ್ನು ಸ್ಥಳೀಯ ವಿತರಕರಿಗೆ ನೀಡಿ. ಇದರಲ್ಲಿ ಇರುವ ಗ್ಯಾಸ್ ನ್ನು ವಿತರಕರು ಸುಲಭವಾಗಿ ತೆಗೆಯುವರು.
ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸುವ ವೇಳೆ ಆಯತಪ್ಪಿ ಬಿದ್ದ ಅಗ್ನಿಶಾಮಕ ಸಿಬ್ಬಂದಿ ವಿನಯ್
ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಅಗ್ನಿಶಾಮಕದಳ ಸಿಬ್ಬಂದಿ ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಅಗ್ನಿ ಅವಘಡದಲ್ಲಿ ಸಿಲುಕಿದ್ದ ತುಂಬು ಕುಟುಂಬವನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದರು.

ಶನಿವಾರ ರಾತ್ರಿ ಸುಮಾರು 10.45ರ ವೇಳೆಗೆ ಮಾರತ್ತಹಳ್ಳಿಯ ಕಾರ್ತಿಕ್ ನಗರದಲ್ಲಿರೋ ಬಾಗಮನಿ ಟೆಕ್ ಪಾರ್ಕ್ ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಕಟ್ಟಡದ 5 ಮತ್ತು 6ನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಕಾಣಿಸಿಕೊಂಡ ಭಾಗದಲ್ಲಿ ಲೊಗ್ಯಾಟೋ ಕಂಪನಿಯ ಕೆಲಸಗಳು ನಡೆದಿದ್ದವು.

ಕಟ್ಟಡದೊಳಗೆ ಥರ್ಮಾಕೋಲ್, ಪೇಪರ್ ಮತ್ತು ಫ್ಲೈವುಡ್ ಗಳು ಇದ್ದಿದ್ದರಿಂದ ಬೆಂಕಿ ಬೇಗ ಆವರಿಸಿಕೊಂಡಿದೆ. ಇನ್ನೂ ಕಟ್ಟಡದಲ್ಲಿದ್ದ ಮೂವರು ಕಾರ್ಮಿಕರು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೊರ ಓಡಿ ಬಂದಿದ್ದಾರೆ.

ಮಧ್ಯರಾತ್ರಿ ಬೆಂಕಿ ಕೆನ್ನಾಲಿಗೆಗೆ ಕಟ್ಟಡ ಸಂಪೂರ್ಣ ಹೊತ್ತಿ ಉರಿದಿದೆ. 10 ಜನ ಅಗ್ನಿ ಶಾಮಕ ಸಿಬ್ಬಂದಿ ಲ್ಯಾಡರ್ ಬಳಸಿ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಇನ್ನು ಬೆಂಕಿ ನಂದಿಸುವ ವೇಳೆ ಓರ್ವ ಅಗ್ನಿಶಾಮಕ ಸಿಬ್ಬಂದಿ ನಾಲ್ಕನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ನಿರ್ಮಾಣ ಹಂತದ ಕಟ್ಟಡವಾಗಿದ್ದರಿಂದ ಸುತ್ತಲೂ ನೆಟ್ ಹಾಕಲಾಗಿತ್ತು. ಹಾಗಾಗಿ ಪ್ರಾಣಾಪಾಯ ಸಂಭವಿಸಿಲ್ಲ.

ಮಹದೇವಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಿನಯ್ ಎಂಬವರು ಗಾಯಗೊಂಡಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ವಿನಯ್ ಅವರ ಕೈ, ಕಾಲು ಮತ್ತು ತಲೆ ಭಾಗಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿನಯ್ ಅವರು ಏರಿಯಲ್ ಲ್ಯಾಡರ್ ಮೂಲಕ ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದರು
ನೆಲಮಂಗಲದಲ್ಲಿನ ಲೋಹಿತ್ ನಗರದ ಸ್ವಸ್ತಿಕ್ ಮಿಲ್ನಲ್ಲಿ ಬೆಂಕಿ ಆಕಸ್ಮಿಕ
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳ ಮಿಂಚಿನ ಕಾರ್ಯಾಚರಣೆಯಿಂದ ತಪ್ಪಿದ ಬಾರಿ ಅವಘಡ.
ಬುಧವಾರ 17/11/2021
ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಬುಧವಾರ 17/11/2021ರ ತಡರಾತ್ರಿ ಮನೆಯ ಗೇಟ್ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ.
ಬುಧವಾರ ತಡರಾತ್ರಿ ಮನೆಯ ಗೇಟ್ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಉರಿಯುತ್ತಿದ್ದ ಕಾರನ್ನ ನಂದಿಸುವಾಗಡಿದ್ದು, ಉರಿಯುತ್ತಿದ್ದ ಕಾರನ್ನ ನಂದಿಸುವಾಗ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಸ್ಫೋಟ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯ ಮುಖದ ಮುಂದೆಯೇ ಬ್ಲಾಸ್ಟ್ ಸಂಭವಿಸಿದೆ. ಬೆಂಕಿ ನಂದಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ. ಮೂವರು ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿವೆ. ಬೆಂಕಿಯಿಂದ ಒಂದು ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ. ಕಿಶೋರ್ ಎಂಬುವರಿಗೆ ಸೇರಿದ ಮನೆ ಮತ್ತು ಕಾರು ಇದಾಗಿದೆ. ಹರೀಶ್, ರಾಜಶೇಖರ್ ಮತ್ತು ಮುತ್ತಪ್ಪ ಗಾಯಗೊಂಡಿರುವ ಅಗ್ನಿಶಾಮಕ ಸಿಬ್ಬಂದಿ.
ಏನಾಯ್ತು?: ಬೆಂಗಳೂರಿನಲ್ಲಿ ಆಕಸ್ಮಿಕ ಬೆಂಕಿಯಿಂದ ಕಾರು ಭಸ್ಮ ಪ್ರಕರಣದಲ್ಲಿ ಮೊದಲು ಮನೆಯಲ್ಲಿದ್ದ UPS ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆಗಳು ಇಡೀ ಮನೆಯನ್ನೇ ಆವರಿಸಿದೆ. ಬಳಿಕ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಹೊತ್ತಿದ ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಮೂವರು ಸಿಬ್ಬಂದಿಗೆ ಗಾಯಗಳಾಗಿವೆ.
ಘಟನೆ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಂಕಿ ಬಿದ್ದ ಕೂಡಲೇ ಟೆರೇಸ್ ಮೂಲಕ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಟೆರೇಸ್ನಲ್ಲಿದ್ದ ಗೇಟ್ ಒಡೆದ ಈ ಮೂವರೂ, ಪಕ್ಕದ ಬಿಲ್ಡಿಂಗ್ಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಮನೆ, ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ.
ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಎಲ್ಲರ ಪ್ರೀತಿಯ ಅಪ್ಪು ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಆ ನಗು, ಆ ಧ್ವನಿ, ಅವರ ಸರಳ ವ್ಯಕ್ತಿತ್ವ ಮತ್ತು ನೊಂದವರಿಗೆ ಸಹಾಯಾಸ್ತ ಚಾಚುವ ಗುಣ ಹಾಗೂ ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುತ್ತಿದ್ದ ಪುನೀತ್ಗೆ ಪುನೀತನೇ ಸರಿಸಾಟಿ.
ಪ್ರತಿಯೊಂದು ಚಿತ್ರದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದ ಅಪ್ಪು ಕರ್ನಾಟಕದ ಮನೆ ಮಗನಾಗಿದ್ದಾರು. ಅಪ್ಪನ ನಡೆಯನ್ನೇ ಅನುಸರಿಸಿದ ಅಪ್ಪು ಎಲ್ಲರ ಹೃದಯದಲ್ಲೂ ಮನೆ ಮಾಡಿದ್ದರು. ಸಾಕಷ್ಟು ಅನಾಥಾಶ್ರಮ, ವೃದ್ಧಾಶ್ರಮ, ಹೆಣ್ಣು ಮಕ್ಕಳು ಶಿಕ್ಷಣ ಸೇರಿದಂತೆ ಲೆಕ್ಕವಿಲ್ಲದಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ ಧೀಮಂತ ವ್ಯಕ್ತಿ ಇಂದು ನಮ್ಮ ಮುಂದೆ ಇಲ್ಲದಿರುವುದು, ಸಮಾಜಕ್ಕೆ ಆದ ಬಹು ದೊಡ್ಡ ನಷ್ಟವಾಗಿದೆ. ಕೆಲವರು ಪುನೀತ್ ಅವರಲ್ಲಿ ದೇವರನ್ನು ಕಂಡಿದ್ದಾರೆ. ಅಂತಹ ಮಹಾನ್ ಚೇತನ ಇಂದು ನಮ್ಮ ನಡುವೆ ಇಲ್ಲ ಎಂಬುದನ್ನು ನಿಜಕ್ಕೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಇದೊಂದು ಕನಸಾಗಿ ಬಿಡಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿರುವುದಂತೂ ಸತ್ಯ.
ಇನ್ನು ಅಪ್ಪು ವ್ಯಕ್ತಿತ್ವ ಎಂಥದ್ದು ಎನ್ನುವುದನ್ನು ಅವರ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ ನೀನೆ ರಾಜಕುಮಾರ' ಹಾಡು ಸಾರಿ ಸಾರಿ ಹೇಳುತ್ತದೆ. ಚಿತ್ರರಂಗದಲ್ಲಿ ರಾಜನಂತೆ ಮೆರೆದ ಅಪ್ಪು, ಎಷ್ಟೋ ಮನೆಗೆ ಹೊಸ ಬೆಳಕಾಗಿ, ಎಷ್ಟೋ ಮನಗಳ ನೋವ ನೀಗಿಸಿ ದೀಪವಾಗುವ ಮೂಲಕ ಎಲ್ಲರು ಆರಾಧಿಸುವ ರಾಜರತ್ನನಾಗಿದ್ದಾರೆ.
ಸಾಕಷ್ಟು ಸೋಲು-ಗೆಲುವುಗಳನ್ನು ಕಂಡಿರುವ ಪುನೀತ್, ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು ಎನ್ನುವಂತೆ ಜೀವನದಲ್ಲಿ ಎಂದು ಕುಗ್ಗಲಿಲ್ಲ. ವರ್ಷಕ್ಕೆ ಎರಡ್ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಪುನೀತ್ ಈ ಮೂಲಕ ಪರೋಕ್ಷವಾಗಿ ಸಾಕಷ್ಟು ಜನರ ಜೀವನಕ್ಕೆ ಆಸರೆಯಾಗಿದ್ದರು. ಎಂದು ಯಾರ ಮುಂದೆಯು ಸೋಲದ ಪುನೀತ್, ಎಲ್ಲರ ರಾಜಕುಮಾರನೇ ಸರಿ.
ತಂದೆ ಮೇರು ನಟನಾದರೂ ಅಪ್ಪುಗೆ ಅದರ ಬಗ್ಗೆ ಅಹಂ ಎಂದೂ ಇರಲಿಲ್ಲ. ತುಂಬಾ ಸರಳ ವ್ಯಕ್ತಿಯಾದ ಪುನೀತ್, ಗುಡಿಸಲೇ ಆಗಲಿ, ಅರಮನೆ ಆಗಲಿ ಎಂದು ಆಟ ನಿಲ್ಲದು ಎನ್ನುವಂತೆ ಎಲ್ಲರೊಂದಿಗೆ ಬೆರೆತು ಸಾಮಾನ್ಯ ವ್ಯಕ್ತಿಯಂತೆ ಜೀವಿಸಿದವರು. ಅದಕ್ಕೆ ಉದಾಹರಣೆಯಾಗಿ ಕೆಲವೇ ದಿನಗಳ ಹಿಂದೆ ಡಾಕ್ಯುಮೆಂಟರಿ ಶೂಟಿಂಗ್ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್, ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು ಊರುಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪುನೀತ್ ಅವರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಕುರಿಗಾಯಿಗಳು ನೀಡಿದ ಸಂಗಟಿ ಸವಿದು ಸಂಭ್ರಮಿಸಿದ್ದರು. ಇದಕ್ಕೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಪುನೀತ್ ಸರಳತೆ ಕಂಡು ಭಾವುಕರಾಗಿದ್ದರು.
ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧವ ತೋರದು ಎಂದು ಬೇಧ ತೋರದು ಎಂಬ ಸಾಲು ಅಪ್ಪು ವ್ಯಕ್ತಿತ್ವದಿಂದಲೇ ಹುಟ್ಟಿಕೊಂಡಿದೆ ಎಂದರೆ ತಪ್ಪಾಗಲಾರದು. ಯಾವುದೇ ಸಭೆ, ಸಮಾರಂಭಗಳಿಗೆ ಹೋದರು ಪುನೀತ್ ಹಿರಿಯರಿಗೆ ಗೌರವ ಸೂಚಿಸುತ್ತಿದ್ದರು. ತಮಗಿಂತ ಕಿರಿಯವರನ್ನು ಕೂಡ ಗೌರವ ಕೊಟ್ಟೆ ಮಾತನಾಡಿಸುತ್ತಿದ್ದರು. ನಾನೊಬ್ಬ ಸ್ಟಾರ್ ಎಂಬುದನ್ನು ಎಂದಿಗೂ ಜನರ ಮುಂದೆ ಅಪ್ಪು ತೋರಿಸಿಕೊಂಡವರಲ್ಲ.
ಪುನೀತ್ಗೆ ಯಾವುದರಲ್ಲೂ ಕಡಿಮೆ ಆಗಿರಲಿಲ್ಲ. ಸಾಕಷ್ಟು ಹಣವಿದ್ದರೂ ಅದನ್ನು ಮೀರಿಸುವಷ್ಟು ಹೃದಯ ಶ್ರೀಮಂತ್ರಿಕೆಯನ್ನು ಹೊಂದಿದ್ದರು. ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿ ತೋರಿದಂತಹ ವ್ಯಕ್ತಿತ್ವ. ತೆರೆಯ ಹಿಂದೆ ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ ಅಪ್ಪು ಅವರದ್ದು ಆಕಾಶ ನೋಡದ ಕೈ. ಅವರಿದ್ದ ಕಡೆಯಲೆಲ್ಲ ಪ್ರೀತಿ ಹಂಚಿವುದೇ ಅವರ ಬೆಲೆ ಕಟ್ಟಲಾಗದ ಗುಣ.
ಜೊತೆಗಿರು ನೀನು ಅಪ್ಪನ ಹಾಗೆ, ಹಣ್ಣೆಲೆ ಕಾಯೊ ವಿನಯಿದಿ ಹೀಗೆ ಎಂಬಂತೆ ಹೆತ್ತ ಮಕ್ಕಳಿಂದ ದೂರಾದ ಅನೇಕ ಹಿರಿಯರಿಗೆ ಮಗ ಹಾಗೂ ತಂದೆಯ ಸ್ಥಾನದಲ್ಲಿ ನಿಂತು ಅವರ ಕೊನೆಯ ಕಾಲದ ಜೀವನ ಸುಖಮಯವಾಗಿಸಿದವರಲ್ಲಿ ಪುನೀತ್ ಒಂದು ಹೆಜ್ಜೆ ಮುಂದು. ಸಾಕಷ್ಟು ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸುತ್ತಿರುವ ಪುನೀತ್ ಅನೇಕರ ಬಾಳಿನ ಭರವಸೆ ಆಗಿದ್ದರು.
ನಿಜಕ್ಕೂ ನಿನ್ನನು (ಪುನೀತ್) ಪಡೆದ ನಾವು ಪುನೀತರೇ.. ಸದಾ ಕಾಲ ನಗು ನಗುತ ಬಾಳು ಎಂದು ಹಾರೈಸಿದ ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆ ಫಲಿಸಲೇ ಇಲ್ಲ. ಅರ್ಧಕ್ಕೆ ಅನೇಕರನ್ನು ಅನಾಥರನ್ನಾಗಿ ಮಾಡಿ ಹೊರಟರು ಅಪ್ಪು. ನಿಜಕ್ಕೂ ಈ ಸಾವು ನ್ಯಾಯವೇ? ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಂತೆ ಬಹುತೇಕರ ಪಾಲಿಗೆ ಪುನೀತ್ ನಂದಾ ದೀಪವಾಗಿದ್ದರು. ಆದರೆ, ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು ನಿಂತಿದೆ ಮತ್ತು ಸಮಯದ ಸೂತ್ರ ಅವನದು (ದೇವರು) ಎನ್ನುವ ಮಾತು ಅಪ್ಪು ವಿಚಾರದಲ್ಲೂ ನಿಜವಾಯಿತು. ಆದರೆ, ಇನ್ನಷ್ಟು ವರ್ಷ ನಮ್ಮನ್ನು ರಂಜಿಸುತ್ತಾರೆ ಅಂದುಕೊಂಡಿದ್ದಾಗಲೇ ದೇವರು ಅವರ ಪಾತ್ರವನ್ನು ಮುಗಿಸಿ ಬೇಗ ಕರೆಸಿಕೊಂಡುಬಿಟ್ಟ. ಹೀಗಾಗಿಯೇ ಇಂದು ಅಸಂಖ್ಯಾತ ಜನರು ದೇವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಏನೇ ಆದರೂ ಬೊಂಬೆ ಹೇಳಿದ ಒಂದು ಮುತ್ತಿನ ಕಥೆಯಯಲ್ಲಿದ್ದ ರಾಜ, ಈ ರಾಜಕುಮಾರನೇ. ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೆ ಉಳಿವುದು ಕೊನೆಗೆ ಎನ್ನುವಂತೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಲ್ಲಿ ಎಂದಿಗೂ ಆರದ ದೀಪವಾಗಿಯೇ ಅಪ್ಪು ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಈ ಜಗತ್ತಿಗೆ ಸೂರ್ಯನು ಒಬ್ಬನೇ, ಚಂದ್ರನು ಒಬ್ಬನೇ ಕನ್ನಡ ಚಿತ್ರರಂಗಕ್ಕೆ ಈ ರಾಜನೂ ಒಬ್ಬನೇ. ಬೊಂಬೆ ಹೇಳುತೈತೆ ಮತ್ತೆ…. ಹೇಳುತೈತೆ ನೀನೆ ರಾಜಕುಮಾರ….
ಹಾಡಿನ ಸಂಪೂರ್ಣ ಸಾಲು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದ ಮನೆಯ ಮನಗಳ ಇಂದು
ಆರಾಧಿಸೊ ರಾರಾಧಿಸೊ ರಾಜರತ್ನನು
ಆಡಿಸಿಯೆ ನೋಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಗುಡಿಸಲೆ ಆಗಲಿ ಅರಮನೆ ಆಗಲಿ
ಆಟವೆ ನಿಲ್ಲದು
ಎಂದು ಆಟ ನಿಲ್ಲದು
ಹಿರಿಯರೆ ಇರಲಿ ಕಿರಿಯರೆ ಬರಲಿ
ಬೇಧವೆ ತೋ ರದು ಎಂದು ಬೇಧ ತೋರದು
ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯ ನಿನದು
ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೊ ವಿನಯಿದಿ ಹೀಗೆ
ನಿನ್ನನು ಪಡೆದ ನಾವು ಪುನೀತ
ಬಾಳು ನಗು ನಗುತ
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೆ ಉಳಿವುದು ಕೊನೆಗ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ
ಈ ರಾಜನೂ ಒಬ್ಬ
ಆಡಿಸಿಯೆ ನೋ ಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ನವೆಂಬರ್ 5ರಂದು ಆಚರಣೆ ಮಾಡುವ ಬಲಿಪಾಡ್ಯಮಿಯಂದು ಗೋವಿನ ಪೂಜೆಯನ್ನು ಅಂದು ಸಂಜೆ 5.30ರಿಂದ 6.30ರ ಗೋಧೂಳಿ ಲಗ್ನದಲ್ಲಿ ಪೂಜೆ ಮಾಡುವಂತೆ ಆದೇಶ ನೀಡಲಾಗಿದೆ.
ಬಲಿ ಪಾಡ್ಯಮಿಯಂದು ನಡೆಯುವ ಗೋ ಪೂಜೆ
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ.ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ, ತಿಂಡಿತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ನಡೆದು ಬಂದಿದೆ.m
ಮಹಾಭಾರತದ ಕಾಲಘಟ್ಟದಲ್ಲಿ ಕಾರ್ತಿಕ ಶುದ್ಧ ಪಾಡ್ಯದ ದಿನದಂದು ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋಪಾಲಕರಿಗೆ ರಕ್ಷಣೆ ನೀಡಿದ ಎಂಬ ಪ್ರತೀತಿಯೂ ಇದೆ. ಈ ದಿನದಂದು ಗೋವರ್ಧನ, ಗೋ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಕೃಷ್ಣ, ಗೋಪ-ಗೋಪಿಯರ, ಇಂದ್ರ, ಹಸುಗಳ, ಕರುಗಳ ಚಿತ್ರಗಳನ್ನು ಜೋಡಿಸಿ ಮೆರವಣಿಗೆ ಮಾಡುತ್ತಾರೆ. ಗೋಪೂಜೆಯನ್ನು ಬಲಿಪಾಡ್ಯಮಿ ದಿನದಂದು ಆಚರಣೆ ಮಾಡಲಾಗುತ್ತದೆ. ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಇನ್ನು ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶ.
ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪೆಟ್ರೋಲ್-ಡಿಸೇಲ್, ಬಂಗಾರ, ತೈಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಬೆಂಕಿಕಡ್ಡಿ ಸರದಿ. ಬೆಂಕಿ ಪೊಟ್ಟಣದ ಬೆಲೆ ಏರಿಕೆ ಕಾಣಲಿದೆ.
ತಮಿಳುನಾಡಿನ ಶಿವಕಾಶಿಯಲ್ಲಿ ಐದು ಪ್ರಮುಖ ಬೆಂಕಿಪೊಟ್ಟಣದ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆದಿದೆ. ಸಭೆಯಲ್ಲಿ ಬೆಂಕಿಪೊಟ್ಟಣದ ಬೆಲೆ ಏರಿಕೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 1 ರಿಂದ ಬೆಂಕಿ ಪೊಟ್ಟಣದ ಬೆಲೆ ಏರಲಿದೆ. ಒಂದು ರೂಪಾಯಿಯಿದ್ದ ಬೆಲೆ 2 ರೂಪಾಯಿಯಾಗಲಿದೆ.
2007ರಲ್ಲಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಲಾಗಿತ್ತು. 50 ಪೈಸೆಯಿದ್ದ ಬೆಲೆಯನ್ನು 1 ರೂಪಾಯಿಗೆ ಏರಿಸಲಾಗಿತ್ತು. 14 ವರ್ಷದ ನಂತ್ರ ಪೊಟ್ಟಣದ ಬೆಲೆ ಹೆಚ್ಚಾಗ್ತಿದೆ. ಬೆಂಕಿಕಡ್ಡಿಗಳನ್ನು ತಯಾರಿಸಲು 14 ರೀತಿಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಈ ಎಲ್ಲಾ ಕಚ್ಚಾ ವಸ್ತುಗಳ ಬೆಲೆಗಳು ಸಾಕಷ್ಟು ಹೆಚ್ಚಾಗಿದೆ. ಹಾಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ.
ಕೆಂಪು ರಂಜಕದಿಂದ ಹಿಡಿದು, ಮೇಣ, ಬಾಕ್ಸ್ ಬೋರ್ಡ್, ಪೇಪರ್, ಸ್ಪ್ಲಿಂಟ್ಸ್, ಪೊಟಾಶಿಯಂ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಇದ್ರಿಂದ ಬೆಂಕಿಪೊಟ್ಟಣದ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ.
ನೆಲಮಂಗಲ ಸಮೀಪದ ಟಿ ಬೇಗೂರು ಗ್ರಾಮದಲ್ಲಿ Restolex ಎಂಬ ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಮಿಷನರಿ, ಕಚ್ಛಾ ಮತ್ತು ಸಿದ್...