Wednesday, February 17, 2021

‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್



‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್  


 ‘ಮುಂದಿನ ಕೆಲ ದಿನಗಳವರೆಗೆ ಕನ್ನಡ ಸಿನಿಮಾಗಳನ್ನ ಒಪ್ಪಿಕೊಳ್ಳುವುದಿಲ್ಲ’ ಎಂದು ತಾನೂ ಮಾಡಿದ್ದ ಟ್ವೀಟ್ ಬಗ್ಗೆ ನಟಿ ಶೃತಿ ಹಾಸನ್ ಸ್ಪಷ್ಟನೆ ನೀಡಿದ್ದಾರೆ.


ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಶನ್ ನಲ್ಲಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿರುವ ಸಲಾರ್ ಚಿತ್ರಕ್ಕೆ ಶೃತಿ ಹಾಸನ್ ನಾಯಕಿಯಾಗಿದ್ದಾರೆ. ಈ ಸುದ್ದಿ ಹೊರಬೀಳುತ್ತಲೇ ಶೃತಿ ಹಾಸನ್ 2017 ರಲ್ಲಿ ಕನ್ನಡ ಚಿತ್ರಗಳ ಕುರಿತು ಮಾಡಿದ್ದ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


ಅದು 2017. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ನಾಯಕಿ ಪಾತ್ರಕ್ಕೆ ಬಹುಭಾಷಾ ನಟಿ ಶೃತಿ ಹಾಸನ್ ಅವರಿಗೆ ಅಪ್ರೋಚ್ ಮಾಡಲಾಗಿತ್ತು. ಶೃತಿ ಈ ಚಿತ್ರದಲ್ಲಿ ನಟಿಸಬಹುದು ಎನ್ನುವ ನಿರೀಕ್ಷೆ ಕನ್ನಡ ಸಿನಿ ರಸಿಕರಲ್ಲಿತ್ತು. ಒಂದು ಹಂತದಲ್ಲಿ ಶೃತಿ ಹಾಸನ್ ಪೊಗರು ಚಿತ್ರಕ್ಕೆ ಫೈನಲ್ ಆಗಿದ್ದಾರೆ ಎನ್ನುವ ಟಾಕ್ ಕೂಡ ಜೋರಾಗಿ ಕೇಳಿ ಬಂದಿತ್ತು. ಆದರೆ, ಈ ಚಿತ್ರದಲ್ಲಿ ನಟಿಸಲು ಶೃತಿ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ಟ್ವಿಟ್ ಮಾಡಿ, ‘ಮುಂದಿನ ಕೆಲ ದಿನಗಳವರೆಗೆ ನಾನೂ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಚನೆಯಲ್ಲಿಲ್ಲ. ಪೊಗರು ಚಿತ್ರದ ಬಗ್ಗೆ ನನ್ನ ಜತೆ ಯಾರೂ ಕೂಡ ಮಾತಾಡಿಲ್ಲ ಎಂದಿದ್ದಾರೆ.

ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಡಿ. ಎಸ್. ಕರ್ಕಿ

ಹಚ್ಚೇವು ಕನ್ನಡದ ದೀಪ

ಡಿ. ಎಸ್. ಕರ್ಕಿ

ಹಚ್ಚೇವು ಕನ್ನಡದ ದೀಪ

ಕರುನಾಡ ದೀಪ ಸಿರಿನುಡಿಯ ದೀಪ

ಒಲವೆತ್ತಿ ತೋರುವ ದೀಪ || ಪ ||

ಬಹುದಿನಗಳಿಂದ ಮೈಮರೆವೆಯಿಂದ

ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸ-

ಲಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ, ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರವ ತೆರೆದೇವು ಮನವ

ಎರೆದೇವು ಒಲವ - ಹಿಡಿ ನೆನಪ

ನರನರವನೆಲ್ಲ ಹುರಿಗೊಳಿಸಿ ಹೊಸೆದು

ಹಚ್ಚೇವು ಕನ್ನಡದ ದೀಪ.|| 1 ||

ಕಲ್ಪನೆಯ ಕಣ್ಣು ಹರಿವನಕ ಸಾಲು

ದೀಪಗಳ ಬೆಳಕ ಬೀರೇವು

ಹಚ್ಚಿರುವ ದೀಪದಲಿ ತಾಯರೂಪ

ಅಚ್ಚಳಿಯದಂತೆ ತೋರೇವು

ಒಡಲೊಡಲ ಕೆಚ್ಚಿನ ಕಿಡಿಗಳನ್ನು

ಗಡಿನಾಡಿನಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ?

ನಾಡೊಲವೆ ನೀತಿ ಹಿಡಿನೆನಪ

ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ || ೨ ||

ಕರುನಾಡಿನರಿವ ನೆರೆತೀವಿ ಭಾವ

ದಲಿ ಜೀವನಾಡಿ ನುದಿಸೇವು

ತೆರೆತೆರೆದ ಕಣ್ಣಿನಲಿ ನೇಹವೆರೆದು

ನವ ಜ್ಯೋತಿಯನ್ನೆ ಮುಡಿಸೇವು

ನಮ್ಮನ್ನವುಂಡು ಅನ್ಯಾಯಗೈಯು-

ವಂಥವರ ಹುಚ್ಚ ಬಿಡಿಸೇವು

ಇಹುದೆಮಗೆ ಛಲವು, ಕನ್ನಡಿಗರ ಬಲವು

ಕನ್ನಡದ ಒಲವು - ಹಿಡಿ ನೆನವು

ನಮ್ಮೆದೆಯ ಕೆಚ್ಚುನೆಚ್ಚುಗಳನೂಡಿ

ಹಚ್ಚೇವು ಕನ್ನಡದ ದೀಪ || ೩ ||

ನಮ್ಮವರು ಗಳಿಸಿದ ಹೆಸರುಳಿಸಲು

ಎಲ್ಲಾರು ಒಂದುಗೂಡೇವು

ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ

ಮಾತೆಯನು ಪೂಜೆಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ

ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ ಕಡೆದೇವು ಇರುಳ

ಪಡೆದೇವು ತಿರುಳ ಹಿರಿನೆನಪಾ

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ

ಹಚ್ಚೇವು ಕನ್ನಡದ ದೀಪ|| ೪ ||


Videos - ನಿಮ್ಮ ಮನಸ್ಸಿನ ಏಕಾಗ್ರತೆಗೆ, ಓದಿದ್ದನ್ನು ನೆನಪಿನಲ್ಲಿಡಲು ಹಾಗೂ ನೆಮ್ಮದಿಯ ನಿದ್ದೆಗಾಗಿ ಈ ವಿಡಿಯೋ ನೋಡಿ

ಕರುನಾಡ ದೀಪ 🪔 ಸುಭಾಷಿತ

 

Restolex ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ದುರಂತ

 ನೆಲಮಂಗಲ ಸಮೀಪದ ಟಿ ಬೇಗೂರು ಗ್ರಾಮದಲ್ಲಿ Restolex ಎಂಬ ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಮಿಷನರಿ, ಕಚ್ಛಾ ಮತ್ತು ಸಿದ್...