Tuesday, March 9, 2021
YASH: ಮತ್ತೊಂದು ಹೊಸ ದಾಖಲೆ ಬರೆದ ರಾಕಿಂಗ್ಸ್ಟಾರ್ ಯಶ್
KGF ಮೂಲಕ ನಟ ಯಶ್ ಪ್ಯಾನ್ ಇಂಡಿಯಾ ನಟನಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ತಮ್ಮ ಸಿನಿಮಾದ ಮೂಲಕ ದಾಖಲೆ ನಿರ್ಮಿಸಿರುವ ಅವರು ಈಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ.
ನಟ ಯಶ್ ಪ್ರಸ್ತುತ ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ದೇಶದ ಎಲ್ಲಾ ಅಭಿಮಾನಿಗಳನ್ನು ಹೊಂದಿದ ಹಿನ್ನಲೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಏರಿಕೆ ಕಂಡಿದೆ. ಹಿಂದಿ, ತೆಲುಗಿನಲ್ಲಿ ಮಿಂಚಿರುವ ನಟ ಕಿಚ್ಚ ಸುದೀಪ್ 1.1 ಮಿಲಿಯನ್ ಅಭಿಮಾನಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 854 ಸಾವಿರ ಅಭಿಮಾನಿಗಳನ್ನು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹೊಂದಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ 1.3 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ರಕ್ಷಿತ್ ಶೆಟ್ಟಿ 824 ಸಾವಿರ ಅಭಿಮಾನಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿದ್ದಾರೆ. ಧ್ರುವ ಸರ್ಜಾ 25.4 ಸಾವಿರ ಅಭಿಮಾನಿ ಹೊಂದಿದ್ದಾರೆ. ನಟ ಚಿರಂಜೀವಿ ಅಗಲಿಕೆಯಾದರೂ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. ಈಗಲೂ ಅವರ ಖಾತೆಯಲ್ಲಿ 345 ಸಾವಿರ ಅಭಿಮಾನಿಗಳಿದ್ದಾರೆ.
Monday, February 22, 2021
ಕೆಜಿಎಫ್2: ತೆಲುಗು ಹಕ್ಕು 65 ಕೋಟಿ ರು.ಗೆ ಮಾರಾಟ
ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನ ‘ಕೆಜಿಎಫ್ 2’ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಯ ಪೂರ್ವ ಬ್ಯುಸಿನೆಸ್ಗೆ ಮುಂದಾಗಿದ್ದು, ಅದರ ಮೊದಲ ಭಾಗವೆಂಬಂತೆ ತೆಲುಗಿನಲ್ಲಿ ಈ ಚಿತ್ರದ ಬಿಡುಗಡೆಯ ಹಕ್ಕುಗಳನ್ನು 65 ಕೋಟಿ ರು.ಗೆ ಮಾರಾಟ ಮಾಡಲಾಗಿದೆ.
https://youtube.com/playlist?list=PLTMWHXPzg7zC6GWbepothj3I006OCr726
ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರೇ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ಎರಡೂ ತೆಲುಗು ರಾಜ್ಯಗಳಲ್ಲೂ ‘ಕೆಜಿಎಫ್ 2’ ಬಿಡುಗಡೆಯ ಹಕ್ಕುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಾಗೆ ನೋಡಿದರೆ ಈ ಚಿತ್ರದ ಬಿಡುಗಡೆ ಹಕ್ಕುಗಳಿಗಾಗಿ ಸಾಕಷ್ಟುನಿರ್ಮಾಪಕರು ಸಾಲಿನಲ್ಲಿ ನಿಂತಿದ್ದರು. ಅದಕ್ಕೆ ಕಾರಣ ಚಾಪ್ಟರ್ 1 ಯಶಸ್ಸು. ಅಮೆಜಾನ್ ಪ್ರೈಮ್ ಸೇರಿದಂತೆ ಡಿಜಿಟಲ್ ಮಾರುಕಟ್ಟೆಯಲ್ಲಿ ಈ ಚಿತ್ರ ಮಾಡಿದ ಗಳಿಕೆ. ಈ ಹಿಂದೆ ವರಾಹಿ ಚಲನಚಿತ್ರಂ ಬ್ಯಾನರ್ ‘ಕೆಜಿಎಫ್ 1’ರ ಬಿಡುಗಡೆಯ ಹಕ್ಕುಗಳನ್ನು ಕೇವಲ 5 ಕೋಟಿಗೆ ಕೊಂಡು, 12 ಕೋಟಿ ಲಾಭ ಮಾಡಿತ್ತು. ಟೀವಿ ಹಕ್ಕುಗಳಲ್ಲೂ ಎರಡು ಪಟ್ಟು ಲಾಭ ಮಾಡಿಕೊಂಡಿದ್ದರು. ಚಾಪ್ಟರ್ 1ರ ಬ್ಯುಸಿನೆಸ್ ನೋಡಿಯೇ ಚಾಪ್ಟರ್ 2 ಬಿಡುಗಡೆಯ ಹಕ್ಕುಗಳಿಗಾಗಿ ಹಲವು ನಿರ್ಮಾಪಕರು ಮುಂದೆ ಬಂದಿದ್ದರು. ಆದರೆ, ನಿರ್ಮಾಪಕ ವಿಜಯ್ ಕಿರಗಂದೂರು ಅವರು ಹೇಳಿದ ರೇಟು ಕೇಳಿ ನಿರ್ಮಾಪಕರು ಅಚ್ಚರಿಗೊಂಡು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೌದು, ಮೊದಲಿಗೆ 70 ಕೋಟಿಗೆ ಬೇಡಿಕೆ ಇಟ್ಟಿದ್ದರು ನಿರ್ಮಾಪಕರು. ‘ಎರಡೂ ತೆಲುಗು ರಾಜ್ಯಗಳ ಬಿಡುಗಡೆ ಹಕ್ಕುಗಳಿಗಾಗಿ ಇಷ್ಟೊಂದು ಮೊತ್ತವೇ’ ಎಂದು ಹಲವು ನಿರ್ಮಾಪಕರು ಮಾತನಾಡಿಕೊಂಡಿದುಂಟು.
ನಿರೀಕ್ಷೆಗೂ ಮೀರಿ ವಿತರಣೆಯ ರೈಟ್ಸ್ನಲ್ಲಿ ಸದ್ದು ಮಾಡುತ್ತಿದ್ದ ‘ಕೆಜಿಎಫ್ 2’ ಚಿತ್ರದ ವ್ಯವಹಾರಕ್ಕೆ ಕೈ ಹಾಕದೆ ಹಲವರು ಸುಮ್ಮನಿದ್ದಾಗ ದಿಲ್ ರಾಜು ಮಾತ್ರ ಧೈರ್ಯ ಮಾಡಿ 70 ಕೋಟಿಯನ್ನು 65 ಕೋಟಿ ರು.ಗೆ ಇಳಿಸಿಕೊಂಡು ರೈಟ್ಸ್ ತೆಗೆದುಕೊಂಡಿದ್ದಾರೆ. ಆ ಮೂಲಕ ತೆಲುಗಿನ ಬಹು ದೊಡ್ಡ ನಿರ್ಮಾಪಕ ಹಾಗೂ ವಿತರಕನ ಕೈಗೆ ಯಶ್ ಚಿತ್ರ ಸೇರಿಕೊಂಡಿದೆ. ಅಂದಹಾಗೆ 65 ಕೋಟಿ ರು.ಗೆ ವ್ಯವಹಾರ ಪಕ್ಕಾ ಮಾಡಿಕೊಂಡಿರುವ ದಿಲ್ ರಾಜು, ಈಗಾಗಲೇ ನಿರ್ಮಾಪಕರಿಗೆ ಮುಂಗಡವಾಗಿಯೂ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ. ಕನ್ನಡ ಸ್ಟಾರ್ ನಟನೊಬ್ಬನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೂ ಮೊದಲೇ ಈ ರೀತಿ ಬ್ಯುಸಿನೆಸ್ ಮಾಡುತ್ತಿರುವುದು ನೋಡಿ ಟಾಲಿವುಡ್ ಕೂಡ ನಿಬ್ಬೆರಗಾಗಿದೆ. ಸದ್ಯ ತಾವು ಅಂದುಕೊಂಡಂತೆ ಟಾಲಿವುಡ್ನಲ್ಲಿ ಬ್ಯುಸಿನೆಸ್ ಮಾಡಿರುವ ಖುಷಿಯಲ್ಲಿದೆ ‘ಕೆಜಿಎಫ್ 2’ ಚಿತ್ರತಂಡ.
https://youtube.com/playlist?list=PLTMWHXPzg7zC6GWbepothj3I006OCr726
ಇತ್ತೀಚೆಗೆ ಹೈದಾರಾಬಾದ್ನಲ್ಲಿ ಇದೇ ದಿಲ್ ರಾಜು ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ತೆಲುಗು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ದಿಲ್ ರಾಜು ಅವರು ಕನ್ನಡದಿಂದ ಯಶ್, ವಿಜಯ್ ಕಿರಗಂದೂರು ಅವರನ್ನೂ ಸಹ ಅಹ್ವಾನಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Friday, February 19, 2021
Thursday, February 18, 2021
Viral Video: ಬಾಟಲಿಯಿಂದ ನೀರು ಕುಡಿದ ನಾಗರಹಾವು: ಐಎಫ್ಎಸ್ ಅಧಿಕಾರಿ ಹಂಚಿಕೊಂಡ ವಿಡಿಯೋ ನೀವು ನೋಡ್ಲೇಬೇಕು
ಒಬ್ಬ ವ್ಯಕ್ತಿಯು ಬಾಟಲಿಯಿಂದ ನಾಗರಹಾವಿಗೆ ನೀರು ಕುಡಿಯಲು ಸಹಾಯ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟ್ಟರ್ನಲ್ಲಿ 17 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಪ್ರಬಲ ಸಂದೇಶದೊಂದಿಗೆ ಕ್ಯಾಪ್ಷನ್ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ. ಅಲ್ಲಿ ಒಬ್ಬ ವ್ಯಕ್ತಿಯು ನೀರಿನಿಂದ ತುಂಬಿದ ಬಾಟಲಿಯನ್ನು ನಾಗರ ಹಾವಿನ ಮುಂದೆ ಹಿಡಿದು ಸರೀಸೃಪಕ್ಕೆ ಅದರ ಬಾಯಾರಿಕೆಯನ್ನು ನೀಗಿಸಲು ಸಹಾಯ ಮಾಡಿದನು. ಅವನು ಬಾಟಲಿಯನ್ನು ಸ್ವಲ್ಪ ಓರೆಯಾಗಿಸಿ ಹಾವು ಸುಲಭವಾಗಿ ಕುಡಿಯುವಂತೆ ಅದನ್ನು ಹಾವಿನ ಬಾಯಿಗೆ ಹತ್ತಿರ ಇಟ್ಟುಕೊಂಡನು.
"ಪ್ರೀತಿ ಮತ್ತು ನೀರು. ಜೀವನದ ಎರಡು ಅತ್ಯುತ್ತಮ ಪದಾರ್ಥಗಳು" ಎಂದು ಐಎಫ್ಎಸ್ ಅಧಿಕಾರಿ ಸುಸಂತಾ ನಂದಾ ತಮ್ಮ ಪೋಸ್ಟ್ಗೆ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
"ಹಾವು ನೀರನ್ನು ಈ ರೀತಿ ಕುಡಿಯಬಹುದೆಂದು ಮೊದಲ ಬಾರಿಗೆ ನೋಡಿದಾಗ ... ಹಾವುಗಳು ಕುಡಿಯಲು ಸಾಧ್ಯವಿಲ್ಲ ಎಂದು ಕೇಳಿದ್ದೆ... ನೀವು ಪರಿಣತರಲ್ಲದಿದ್ದರೆ ಇದನ್ನು ಅನುಸರಿಸುವುದು ಅಪಾಯಕಾರಿ" ಎಂದು ಬಳಕೆದಾರರೊಬ್ಬರು ಹೇಳಿದರು.
"ಪ್ರಕೃತಿಯ ಬಗ್ಗೆ ಉತ್ತಮ ತಿಳುವಳಿಕೆ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಬಾಟಲಿಯಿಂದ ಹಾವು ಕುಡಿಯುವ ವಿಡಿಯೋ ಸಾಮಾಜಿಕ ಮಾಧ್ಯಮಗಳ ಗಮನ ಸೆಳೆದಿರುವುದು ಇದೇ ಮೊದಲಲ್ಲ. 2017 ರಲ್ಲಿ, ಬಾಯಾರಿದ ನಾಗರಹಾವು, ಕರ್ನಾಟಕದ ಕೈಗಾ ಪ್ರದೇಶಕ್ಕೆ ಹೋಗಿತ್ತು. ಅಲ್ಲಿ ವನ್ಯಜೀವಿ ಪಾರುಗಾಣಿಕಾ ಕಾರ್ಯಕರ್ತರು ನೀರನ್ನು ನೀಡಿದ್ದರು. ಆಗಲೂ ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು.
Wednesday, February 17, 2021
‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್
‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್
‘ಮುಂದಿನ ಕೆಲ ದಿನಗಳವರೆಗೆ ಕನ್ನಡ ಸಿನಿಮಾಗಳನ್ನ ಒಪ್ಪಿಕೊಳ್ಳುವುದಿಲ್ಲ’ ಎಂದು ತಾನೂ ಮಾಡಿದ್ದ ಟ್ವೀಟ್ ಬಗ್ಗೆ ನಟಿ ಶೃತಿ ಹಾಸನ್ ಸ್ಪಷ್ಟನೆ ನೀಡಿದ್ದಾರೆ.
ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸೂಪರ್ ಸ್ಟಾರ್ ಪ್ರಭಾಸ್ ಕಾಂಬಿನೇಶನ್ ನಲ್ಲಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿರುವ ಸಲಾರ್ ಚಿತ್ರಕ್ಕೆ ಶೃತಿ ಹಾಸನ್ ನಾಯಕಿಯಾಗಿದ್ದಾರೆ. ಈ ಸುದ್ದಿ ಹೊರಬೀಳುತ್ತಲೇ ಶೃತಿ ಹಾಸನ್ 2017 ರಲ್ಲಿ ಕನ್ನಡ ಚಿತ್ರಗಳ ಕುರಿತು ಮಾಡಿದ್ದ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅದು 2017. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ನಾಯಕಿ ಪಾತ್ರಕ್ಕೆ ಬಹುಭಾಷಾ ನಟಿ ಶೃತಿ ಹಾಸನ್ ಅವರಿಗೆ ಅಪ್ರೋಚ್ ಮಾಡಲಾಗಿತ್ತು. ಶೃತಿ ಈ ಚಿತ್ರದಲ್ಲಿ ನಟಿಸಬಹುದು ಎನ್ನುವ ನಿರೀಕ್ಷೆ ಕನ್ನಡ ಸಿನಿ ರಸಿಕರಲ್ಲಿತ್ತು. ಒಂದು ಹಂತದಲ್ಲಿ ಶೃತಿ ಹಾಸನ್ ಪೊಗರು ಚಿತ್ರಕ್ಕೆ ಫೈನಲ್ ಆಗಿದ್ದಾರೆ ಎನ್ನುವ ಟಾಕ್ ಕೂಡ ಜೋರಾಗಿ ಕೇಳಿ ಬಂದಿತ್ತು. ಆದರೆ, ಈ ಚಿತ್ರದಲ್ಲಿ ನಟಿಸಲು ಶೃತಿ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ಟ್ವಿಟ್ ಮಾಡಿ, ‘ಮುಂದಿನ ಕೆಲ ದಿನಗಳವರೆಗೆ ನಾನೂ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸುವ ಯೋಚನೆಯಲ್ಲಿಲ್ಲ. ಪೊಗರು ಚಿತ್ರದ ಬಗ್ಗೆ ನನ್ನ ಜತೆ ಯಾರೂ ಕೂಡ ಮಾತಾಡಿಲ್ಲ ಎಂದಿದ್ದಾರೆ.
ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಡಿ. ಎಸ್. ಕರ್ಕಿ
ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ || ಪ ||
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ - ಹಿಡಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು
ಹಚ್ಚೇವು ಕನ್ನಡದ ದೀಪ.|| 1 ||
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ?
ನಾಡೊಲವೆ ನೀತಿ ಹಿಡಿನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ || ೨ ||
ಕರುನಾಡಿನರಿವ ನೆರೆತೀವಿ ಭಾವ
ದಲಿ ಜೀವನಾಡಿ ನುದಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು-
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು, ಕನ್ನಡಿಗರ ಬಲವು
ಕನ್ನಡದ ಒಲವು - ಹಿಡಿ ನೆನವು
ನಮ್ಮೆದೆಯ ಕೆಚ್ಚುನೆಚ್ಚುಗಳನೂಡಿ
ಹಚ್ಚೇವು ಕನ್ನಡದ ದೀಪ || ೩ ||
ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ
ಹಚ್ಚೇವು ಕನ್ನಡದ ದೀಪ|| ೪ ||
Restolex ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ದುರಂತ
ನೆಲಮಂಗಲ ಸಮೀಪದ ಟಿ ಬೇಗೂರು ಗ್ರಾಮದಲ್ಲಿ Restolex ಎಂಬ ಹಾಸಿಗೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಮಿಷನರಿ, ಕಚ್ಛಾ ಮತ್ತು ಸಿದ್...
-
ಅತ್ಯಂತ ವಿಜೃಂಭಣೆಯಿಂದ ಜರುಗಿದ ಗುಡಿ ಸರಗೂರು ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ 2023 #revannam #Saragur Konda #ಸರಗೂರು ಕೊಂಡ 300 ವರ್ಷಗಳಿಗಿಂತ...
-
‘ಸದ್ಯ ಕನ್ನಡ ಸಿನಿಮಾದಲ್ಲಿ ನಟಿಸೋಲ್ಲ’… ಹಳೇ ಟ್ವೀಟ್ ಗೆ ತೇಪೆ ಹಚ್ಚಿದ ಶೃತಿ ಹಾಸನ್ ‘ಮುಂದಿನ ಕೆಲ ದಿನಗಳವರೆಗೆ ಕನ್ನಡ ಸಿನಿಮಾಗಳನ್ನ ಒಪ್ಪಿಕೊಳ್ಳುವುದಿಲ್ಲ’ ಎಂದು...







